ಮಾರುಕಟ್ಟೆಯಲ್ಲಿ ನಾನಾ ಬಗೆಯ ಶಾಂಪೂಗಳು ಇವೆ. ಆದರೆ ಮನೆಯಲ್ಲಿ ಶಾಂಪೂ ತಯಾರಿಸಿ ಬಳಸಿದರೆ ನಮ್ಮ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ತಲೆಹೊಟ್ಟು, ಕೂದಲು ಉದುರುವಿಕೆ ಕೂಡ ಕಡಿಮೆಯಾಗುತ್ತದೆ. ಸುಲಭವಾಗಿ ಮಾಡುವ ಶಾಂಪೂವಿನ ವಿಧಾನ ಇಲ್ಲಿದೆ ನೋಡಿ.
1 ಕಪ್ ನೊರೆಕಾಯಿ (ಸೋಪ್ ನಟ್), 2 ಟೇಬಲ್ ಸ್ಪೂನ್ ಮೆಂತೆಕಾಳು ತೆಗೆದುಕೊಳ್ಳಿ. ಇದನ್ನು ಬಿಸಿಲಿನಲ್ಲಿ 1 ದಿನಗಳ ಕಾಲ ಚೆನ್ನಾಗಿ ಒಣಗಿಸಿ. ನೊರೆಕಾಯಿಯನ್ನು ಸ್ವಲ್ಪ ಗುದ್ದಿ ಅದರ ಬೀಜ ತೆಗೆದುಕೊಳ್ಳಿ. ನಂತರ ನೊರೆಕಾಯಿ ಹಾಗೂ ಮೆಂತೆಕಾಳುಗಳನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಂಡು ಒಂದು ಡಬ್ಬದಲ್ಲಿ ಹಾಕಿ ಸ್ಟೋರ್ ಮಾಡಿಟ್ಟುಕೊಳ್ಳಿ.
BIG NEWS: ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ; ಬಿ.ವೈ.ವಿಜಯೇಂದ್ರಗೆ ನಿರಾಸೆ
ತಲೆಸ್ನಾನ ಮಾಡುವ ದಿನ ಒಂದು ಬೌಲ್ ನೀರನ್ನು ತೆಗೆದುಕೊಂಡು ಅದನ್ನು ಗ್ಯಾಸ್ ಮೇಲೆ ಇಡಿ. ಅದು ಬಿಸಿಯಾಗುತ್ತಲೇ ಅದಕ್ಕೆ 4 ಚಮಚ ಮಾಡಿಟ್ಟುಕೊಂಡ ಪುಡಿಯನ್ನು ಹಾಕಿ 3 ನಿಮಿಷಗಳ ಕಾಲ ಕುದಿಸಿ. ನಂತರ ಸ್ವಲ್ಪ ತಣ್ಣಗಾದ ಮೇಲೆ ಕೈಯಿಂದ ಈ ಮಿಶ್ರಣವನ್ನು ಚೆನ್ನಾಗಿ ಹಿಸುಕಿ ನಂತರ ಶೋಧಿಸಿಕೊಂಡು ಈ ನೀರಿನಿಂದ ಸ್ನಾನ ಮಾಡಿ.