ಬೆಂಗಳೂರು: ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ರಾಜ್ಯ ಸರ್ಕಾರ ಮಹಿಳೆಯರಿಗೆ ಅವಕಾಶ ಕಲ್ಪಿಸಿದ್ದು, ಯೋಜನೆಯ ಭಾಗವಾಗಿ ಮಹಿಳೆಯರು ಮೊಬೈಲ್ ನಲ್ಲಿ ಗುರುತಿನ ಚೀಟಿ ತೋರಿಸಿದರೂ ಅದನ್ನು ಪರಿಗಣಿಸುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.
ನಿರ್ವಾಹಕರಿಗೆ ಈ ಕುರಿತು ಸೂಚನೆ ನೀಡಲಾಗಿದ್ದು, ಕೆಲವು ಕಡೆ ಮಹಿಳಾ ಪ್ರಯಾಣಿಕರು ಮೊಬೈಲ್ ನಲ್ಲಿ ಗುರುತಿನ ಚೀಟಿ ತೋರಿಸಿದರೆ ಮಾನ್ಯ ಮಾಡುತ್ತಿಲ್ಲ ಎನ್ನುವ ದೂರುಗಳು ವ್ಯಕ್ತವಾಗುತ್ತಿವೆ. ಮಹಿಳಾ ಪ್ರಯಾಣಿಕರು ಮೊಬೈಲ್ ನಲ್ಲಿ ತೋರಿಸುವ ಯಾವುದಾದರೂ ಅಧಿಕೃತ ಗುರುತಿನ ಚೀಟಿ ಪರಿಗಣಿಸುವಂತೆ ನಿರ್ವಾಹಕರಿಗೆ ಸಾರಿಗೆ ಇಲಾಖೆ ಸೂಚನೆ ನೀಡಿದ್ದು, ಈ ಕುರಿತಾಗಿ ದೂರುಗಳು ಸ್ವೀಕೃತಗೊಂಡಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.