![](https://kannadadunia.com/wp-content/uploads/2024/01/Shakthi-yojane.jpg)
ಬೆಂಗಳೂರು : ಶಕ್ತಿ ಯೋಜನೆ ಭರ್ಜರಿ ಸಕ್ಸಸ್ ಆಗಿದ್ದು, ಈವರೆಗೆ 126 ಕೋಟಿ ಟಿಕೆಟ್ ಪಡೆದು ಮಹಿಳೆಯರು ಉಚಿತ ಪ್ರಯಾಣ ಬೆಳೆಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, ಶಕ್ತಿ ಯೋಜನೆ ಜಾರಿಯಾಗಿ 6 ತಿಂಗಳುಗಳಷ್ಟೇ ಪೂರೈಸಿದ್ದರೂ ಸಾಧನೆ ಬೆಟ್ಟದಷ್ಟಿದೆ. ಶಿಕ್ಷಣ, ಉದ್ಯೋಗ, ದೇವರ ದರ್ಶನ ಮುಂತಾದ ಕಾರಣಗಳಿಗಾಗಿ ನಾಡಿನ ಹೆಣ್ಣುಮಕ್ಕಳು 126 ಕೋಟಿಗೂ ಅಧಿಕ ಉಚಿತ ಟಿಕೇಟ್ ಪಡೆದು ಪ್ರಯಾಣ ಬೆಳೆಸಿದ್ದು, ಈ ವರೆಗಿನ ಒಟ್ಟು ಟಿಕೇಟ್ ಮೌಲ್ಯ ರೂ. 3,000 ಕೋಟಿ ದಾಟಿದೆ ಎಂದು ತಿಳಿಸಿದ್ದಾರೆ.
ಮಹಿಳಾ ಸಬಲೀಕರಣದ ಈ ಯೋಜನೆಗೆ ಹೆಣ್ಣುಮಕ್ಕಳಿಂದ ವ್ಯಕ್ತವಾಗುತ್ತಿರುವ ಅಭೂತಪೂರ್ವ ಸ್ಪಂದನೆ ಕಂಡು ಖುಷಿಯಾಗುತ್ತಿದೆ. ಯೋಜನೆಯಿಂದ ಲಾಭ ಪಡೆದು ಮತ್ತಷ್ಟು ಹೆಣ್ಣುಮಕ್ಕಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಲಿ ಎಂದು ಹಾರೈಸಿದ್ದಾರೆ.