2013ರ ಶಕ್ತಿ ಮಿಲ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಇಂದು ಅಂತಿಮ ತೀರ್ಪು ನೀಡಿದೆ. ಬಾಂಬೆ ಹೈಕೋರ್ಟ್ ಮೂವರು ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ. ಮರಣದಂಡನೆಗೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಇಂದು ತೀರ್ಪು ನೀಡಿದೆ. ಏಪ್ರಿಲ್ 4, 2014 ರಂದು ಮುಂಬೈ ಸೆಷನ್ಸ್ ಕೋರ್ಟ್, ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಮೂವರು ಅಪರಾಧಿಗಳಾದ ವಿಜಯ್ ಜಾಧವ್, ಕಾಸಿಂ ಬೆಂಗಾಲಿ ಮತ್ತು ಸಲೀಂ ಅನ್ಸಾರಿಗೆ ಮರಣದಂಡನೆ ವಿಧಿಸಲಾಗಿತ್ತು. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮೂವರು ಅಪರಾಧಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಮೂರ್ತಿ ಎಸ್ ಎಸ್ ಜಾಧವ್ ಮತ್ತು ನ್ಯಾಯಮೂರ್ತಿ ಪೃಥ್ವಿರಾಜ್ ಚೌಹಾಣ್ ಪ್ರಕರಣದ ತೀರ್ಪು ನೀಡಿದ್ದಾರೆ.
ಶಕ್ತಿ ಮಿಲ್ ಸಾಮೂಹಿಕ ಅತ್ಯಾಚಾರದ 2 ಪ್ರಕರಣಗಳಿವೆ. ಛಾಯಾಗ್ರಾಹಕ ಪತ್ರಕರ್ತೆಯ ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತು ಟೆಲಿಫೋನ್ ಆಪರೇಟರ್ ಸಾಮೂಹಿಕ ಅತ್ಯಾಚಾರ ಪ್ರಕರಣ. ಫೋಟೊ ಜರ್ನಲಿಸ್ಟ್ ಪ್ರಕರಣದಲ್ಲಿ 5 ಮಂದಿ ತಪ್ಪಿತಸ್ಥರಿದ್ದು, ಒಬ್ಬ ಅಪ್ರಾಪ್ತ. ಟೆಲಿಫೋನ್ ಆಪರೇಟರ್ ಪ್ರಕರಣದಲ್ಲಿ 5 ಮಂದಿ ತಪ್ಪಿತಸ್ಥರಿದ್ದಾರೆ. ಇದರಲ್ಲಿ ಒಬ್ಬ ಅಪ್ರಾಪ್ತ. ಮೂವರ ಅಪರಾಧಿಗಳು ಎರಡೂ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ಫೋಟೋ ಜರ್ನಲಿಸ್ಟ್ ಪ್ರಕರಣದಲ್ಲಿ ತಪ್ಪಿತಸ್ಥ :
- ಸಿರಾಜ್ ರೆಹಮಾನ್ ಖಾನ್ (ಜೀವಾವಧಿ ಶಿಕ್ಷೆ)
- ವಿಜಯ್ ಮೋಹನ್ ಜಾಧವ್ (ಗಲ್ಲು)
- ಮೊಹಮ್ಮದ್ ಸಲೀಂ ಅನ್ಸಾರಿ (ಗಲ್ಲು)
- ಮೊಹಮ್ಮದ್ ಖಾಸಿಮ್ ಹಫೀಜ್ ಶೇಖ್ ಅಲಿಯಾಸ್ ಖಾಸಿಮ್ ಬೆಂಗಾಲಿ (ಗಲ್ಲು)
- ಚಾಂದ್ ಬಾಬು (ಅಪರಾಧದ ಸಮಯದಲ್ಲಿ ಅಪ್ರಾಪ್ತನಾಗಿದ್ದ)
ಟೆಲಿಫೋನ್ ಆಪರೇಟರ್ ಪ್ರಕರಣದ ತಪ್ಪಿತಸ್ಥ :
- ಮೊಹಮ್ಮದ್ ಅಶ್ಫಾಕ್ ಶೇಖ್ (ಜೀವಾವಧಿ ಶಿಕ್ಷೆ)
- ವಿಜಯ್ ಮೋಹನ್ ಜಾಧವ್ (ಗಲ್ಲು)
- ಮೊಹಮ್ಮದ್ ಸಲೀಂ ಅನ್ಸಾರಿ (ಗಲ್ಲು)
- ಮೊಹಮ್ಮದ್ ಖಾಸಿಮ್ ಹಫೀಜ್ ಶೇಖ್ ಅಲಿಯಾಸ್ ಖಾಸಿಮ್ ಬೆಂಗಾಲಿ (ಗಲ್ಲು)
- ಜಾಧವ್ ಜೆಜೆ (ಅಪರಾಧದ ಸಮಯದಲ್ಲಿ ಅಪ್ರಾಪ್ತರಾಗಿದ್ದ)
ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೊಹಮ್ಮದ್ ಕಾಸಿಂ ಹಫೀಜ್ ಶೇಖ್ ಅಲಿಯಾಸ್ ಕಾಸಿಂ ಬೆಂಗಾಲಿ, ಮೊಹಮ್ಮದ್ ಸಲೀಂ ಅನ್ಸಾರಿ ಮತ್ತು ವಿಜಯ್ ಮೋಹನ್ ಜಾಧವ್ ಇಬ್ಬರೂ ತಪ್ಪಿತಸ್ಥರು. ಬಾಂಬೆ ಹೈಕೋರ್ಟ್ ಆದೇಶದ ನಂತರ ಇದೀಗ ಈ ಮೂವರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಾಯಿಸಲಾಗಿದೆ.
ಆಗಸ್ಟ್ 22,2013 ರಂದು, ನಿಯತಕಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಫೋಟೋ ಜರ್ನಲಿಸ್ಟ್ ಮಹಾಲಕ್ಷ್ಮಿಯ ಶಕ್ತಿ ಮಿಲ್ ಕಾಂಪೌಂಡ್‌ನಲ್ಲಿ ಸಂಜೆ 6.45 ರ ಸುಮಾರಿಗೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ್ದರು.