
ಸಂದೀಪ್ ಸುಂಕಡ್ ನಿರ್ದೇಶನದ ‘ಶಾಖಾಹಾರಿ’ ಚಿತ್ರ ಪ್ರೇಕ್ಷಕರ ಗಮನ ಸೆಳೆದಿದ್ದು, ರಂಗಾಯಣ ರಘು ಅವರ ನಟನೆಗೆ ಫಿದಾ ಆಗಿದ್ದಾರೆ. ಹಾಸ್ಯ ಕಲಾವಿದನಾಗಿ ಮಿಂಚಿದ್ದ ರಂಗಾಯಣ ರಘು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇದೀಗ 25 ದಿನಗಳನ್ನು ಪೂರೈಸಿದ್ದು, ಈ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ ತಿಳಿಸಿದೆ.
ಈ ಚಿತ್ರವನ್ನು ಕೀಳಂಬಿ ಮೀಡಿಯಾ ಲ್ಯಾಬ್ ಬ್ಯಾನರ್ ನಲ್ಲಿ ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ನಿರ್ಮಾಣ ಮಾಡಿದ್ದು, ರಂಗಾಯಣ ರಘು, ಗೋಪಾಲ್ ಕೃಷ್ಣ ದೇಶಪಾಂಡೆ, ವಿನಯ್, ನಿಧಿ ಹೆಗಡೆ ತೆರೆ ಹಂಚಿಕೊಂಡಿದ್ದಾರೆ. ಮಯೂರ್ ಅಂಬೆಕಲ್ಲು ಸಂಗೀತ ಸಂಯೋಜನೆ ನೀಡಿದ್ದು, ಶಶಾಂಕ್ ನಾರಾಯಣ ಸಂಕಲನವಿದೆ.
