ಈ ಸಾಲಿನಲ್ಲಿ ಟಾಪ್ 50 ಭಕ್ಷ್ಯಗಳು ಯಾವುವು ಎಂಬ ಬಗ್ಗೆ ಟೇಸ್ಟ್ ಅಟ್ಲಾಸ್ ಇಡೀ ಪ್ರಪಂಚದ ವರದಿಯನ್ನು ಬಹಿರಂಗಪಡಿಸಿದೆ.
ಪಟ್ಟಿಯು ಪ್ರಪಂಚದಾದ್ಯಂತದ ಭಕ್ಷ್ಯಗಳನ್ನು ಒಳಗೊಂಡಿದ್ದರೂ, ಭಾರತೀಯ ಭಕ್ಷ್ಯಗಳ ಬಗ್ಗೆ ಹೆಚ್ಚಿನ ಉಲ್ಲೇಖವಿಲ್ಲ. ಈ ಪಟ್ಟಿಯಲ್ಲಿ ಜಪಾನಿನ ಖಾದ್ಯವು ಅಗ್ರಸ್ಥಾನದಲ್ಲಿದೆ. ಭಾರತದ ಶಾಹಿ ಪನೀರ್ ಕೂಡ ಪಟ್ಟಿಯಲ್ಲಿದ್ದು 28ನೇ ಸ್ಥಾನದಲ್ಲಿದೆ. ಶಾಹಿ ಪನೀರ್ 4.66 ಅಂಕಗಳನ್ನು ಪಡೆದಿದೆ.
ಈ ಪಟ್ಟಿ ವೈರಲ್ ಆಗುತ್ತಿದ್ದಂತೆಯೇ, ಇದರ ಬಗ್ಗೆ ಹಲವರು ಅಸಮಾಧಾನಗೊಂಡಿದ್ದಾರೆ. ಟ್ವಿಟರ್‌ನಲ್ಲಿ, ಹಲವರು ಶಾಹಿ ಪನೀರ್ ಅನ್ನು ಪಟ್ಟಿಯಲ್ಲಿ ಏಕೆ ಸೇರಿಸಲಾಗಿದೆ, ಬೇರೆ ಯಾವುದನ್ನೂ ಸೇರಿಸಲಾಗಿಲ್ಲ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ನಮ್ಮಲ್ಲಿ ಶಾಹಿ ಪನೀರ್‌ಗಿಂತ ಉತ್ತಮವಾದ ತಿನಿಸುಗಳಿವೆ. ಇದು ಅನ್ಯಾಯ ಎಂದು ಹಲವರು ಕಮೆಂಟ್ ಮೂಲಕ ಹೇಳುತ್ತಿದ್ದಾರೆ.