ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ಅಭಿಮಾನಿಗಳಲ್ಲಿ ಅದೆಂತಹ ಕ್ರೇಜ್ ಹೆಚ್ಚಿರುತ್ತದೆ ಎಂದರೆ ಅನೇಕ ಉತ್ತಮ ಹಾಗೂ ಕೆಟ್ಟ ಸಂಗತಿಗಳು ಹೊರಬರುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆ
ಏಷ್ಯಾಕಪ್‌ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ರೋಚಕ ವಿಜಯ ಪತಾಕೆ ಹಾರಿಸಿದೆ. ಇದೇ ವೇಳೆ ಪಾಕ್ ಕ್ರಿಕೆಟಿಗನ ಕುರಿತು ಮೆಮೆಗಳು, ಜೋಕ್ ಹರಿದಾಡಿದೆ.
ಇನ್ನೊಂದು ಅಚ್ಚರಿ ಎಂದೆ ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಆಗಿದ್ದು ಕೂಡ ಪಾಕ್ ಕ್ರಿಕೆಟಿಗನ ಹೆಸರು.
ಶಾಹೀನ್ ಅಫ್ರಿದಿ ಸೋಫಾ ಹೆಚ್ಚು ಪ್ರಸಿದ್ಧಿ ಪಡೆದ ಮೆಮೆ ಎನಿಸಿಕೊಂಡಿತ್ತು. ಪ್ರಮುಖ ಸಾಮಾಜಿಕ ಜಾಲತಾಣದಲ್ಲಿ
ಶಾಹೀನ್ ಅಫ್ರಿದಿ ಸೋಫಾ ಹೆಚ್ಚು ವೈರಲ್ ಆಗಿತ್ತು.
ಮೊಣಕಾಲಿನ ಗಾಯದ ಕಾರಣ ಶಾಹೀನ್ ಅಫ್ರಿದಿ ಏಷ್ಯಾ ಕಪ್‌ನಿಂದ ಹೊರಗುಳಿದಿದ್ದರು. ಆದರೂ ಅವರು ಹೆಚ್ಚು ಚರ್ಚೆಗೆ ತುತ್ತಾಗಿದ್ದರು. ಅವರ ನಗುವನ್ನು ಹೋಲುವಂತೆಯೇ ಇರುವ ಸೋಫಾ ಸೆಟ್ ಸುಕ್ಕುಗಟ್ಟಿರುವ ಚಿತ್ರವೊಂದು ನೆಟ್ಟಿಗರ ನಗುವಿನ ವಿಷಯವಾಗಿತ್ತು.
ಉಳಿದಂತೆ ರೋಹಿತ್ ಶರ್ಮ ಹೇರ್ ಸ್ಟೈಲ್, ಬಾಬರ್ ಅಜಮ್ ರಿಲೇಶನ್ ಶಿಪ್ ಸ್ಟೇಟಸ್, ಬೂಮ್ರಾ ಧರ್ಮ ಯಾವುದೆಂಬುದರ ಬಗ್ಗೆ ಜನರು ಹೆಚ್ಚು ಸರ್ಚ್ ಮಾಡಿದ್ದರು.