
ಬಾಲಿವುಡ್‌ನ ಕಿಂಗ್ ಖಾನ್ ಅಂತಾನೇ ಕರೆಸಿಕೊಳ್ಳೋ ನಟ ಶಾರುಖ್ ಪತ್ನಿ ಗೌರಿ ಖಾನ್ ಯಶಸ್ವಿ ಉದ್ಯಮಿ. ಗೌರಿ ಇಂಟೀರಿಯರ್ ಡಿಸೈನರ್ ಆಗಿಯೂ ಕೆಲಸ ಮಾಡ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿರೋ ಶಾರುಖ್ ಪತ್ನಿ, ಗಳಿಕೆಯಲ್ಲಿ ಕೂಡ ಅನೇಕ ಟಾಪ್ ನಟಿಯರಿಗಿಂತ ಮುಂದಿದ್ದಾರೆ. 1991ರಲ್ಲಿ ಶಾರುಖ್ ಖಾನ್ ಹಾಗೂ ಗೌರಿ ಖಾನ್ ವಿವಾಹವಾದರು. ಗೌರಿ ಖಾನ್ ದೆಹಲಿಯಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿದ್ದಾರೆ.
ಈಗಾಗ್ಲೇ ಅಂಬಾನಿ, ರಾಲ್ಫ್ ಲಾರೆನ್ ಮುಂತಾದ ಅನೇಕ ಸೆಲೆಬ್ರಿಟಿಗಳ ಮನೆಗಳನ್ನು ವಿನ್ಯಾಸಗೊಳಿಸಿದ್ದಾರೆ. ಇಂಟೀರಿಯರ್ ಡಿಸೈನಿಂಗ್ ಕ್ಷೇತ್ರದಲ್ಲಿ ಗೌರಿ ಹೆಸರು ಮಾಡಿದ್ದಾರೆ. ಮೂಲಗಳ ಪ್ರಕಾರ ಶಾರುಖ್ ಪತ್ನಿಯ ಒಟ್ಟಾರೆ ಆಸ್ತಿ ಮೌಲ್ಯ 1600 ಕೋಟಿ ರೂಪಾಯಿ. ಮುಂಬೈನ ಜುಹುವಿನಲ್ಲಿ ಗೌರಿ ಖಾನ್ ಡಿಸೈನ್ಸ್ ಅನ್ನೋ ಮಳಿಗೆಯೊಂದನ್ನೂ ಅವರು ನಡೆಸುತ್ತಿದ್ದಾರೆ. ಈ ಮಳಿಗೆಯ ಮೌಲ್ಯವೇ ಸುಮಾರು 150 ಕೋಟಿ ರೂಪಾಯಿ. ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಬಂಗಲೆ ಆಂಟಿಲಿಯಾವನ್ನು ಸಹ ಗೌರಿ ವಿನ್ಯಾಸಗೊಳಿಸಿದ್ದಾರೆ.
ಶಾರುಖ್ ನಿವಾಸ ಮನ್ನತ್‌ನಲ್ಲಿ ಸಂಪೂರ್ಣ ಒಳಾಂಗಣ ವಿನ್ಯಾಸವನ್ನು ಖುದ್ದು ಗೌರಿ ಖಾನ್ ಮಾಡಿದ್ದಾರೆ. ಕರಣ್ ಜೋಹರ್, ಆಲಿಯಾ ಭಟ್, ಸಿದ್ಧಾರ್ಥ್ ಮಲ್ಹೋತ್ರಾ ಅವರಂತಹ ಅನೇಕ ಸೆಲೆಬ್ರಿಟಿಗಳ ಮನೆಗಳನ್ನು ಗೌರಿ ಖಾನ್ ವಿನ್ಯಾಸಗೊಳಿಸಿದ್ದಾರೆ. ಶಾರುಖ್ ಹಾಗೂ ಗೌರಿ ಖಾನ್ ಒಟ್ಟಾಗಿ 2002ರಲ್ಲಿ ರೆಡ್ ಚಿಲ್ಲಿಸ್ ಎಂಟರ್‌ಟೈನ್ಮೆಂಟ್ ಅನ್ನು ಸ್ಥಾಪಿಸಿದರು. ಈ ಪ್ರೊಡಕ್ಷನ್ ಹೌಸ್‌ನಲ್ಲಿ ಹಲವು ಚಿತ್ರಗಳು ನಿರ್ಮಾಣವಾಗಿವೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್‌ನ ವಾರ್ಷಿಕ ವಹಿವಾಟು 500 ಕೋಟಿ ರೂಪಾಯಿಯಷ್ಟಿದೆ.