
ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಅವರು ತಮ್ಮ ಬಾಲಿವುಡ್ ವೃತ್ತಿಜೀವನವನ್ನು ಪ್ರಾರಂಭಿಸಿದ 90 ರ ದಶಕದಿಂದಲೂ ನಿಕಟ ಸ್ನೇಹಿತರಾಗಿದ್ದರು. ಹಲವಾರು ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ಮತ್ತು ಐಪಿಎಲ್ ತಂಡದ ಸಹ-ಮಾಲೀಕತ್ವವನ್ನು ಹೊಂದಿರುವ ಇಬ್ಬರು ಸೂಪರ್‌ಸ್ಟಾರ್‌ಗಳು ತಮ್ಮ ಜೀವನದ ಎಲ್ಲಾ ಹಂತಗಳನ್ನು ಪರಸ್ಪರ ನೋಡಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಜೂಹಿ ಚಾವ್ಲಾ, ಶಾರುಖ್ ಖಾನ್ ಆರ್ಥಿಕವಾಗಿ ಆರಂಭದಲ್ಲಿ ಕಷ್ಟ ಅನುಭವಿಸಿದ್ದ ದಿನಗಳನ್ನು ಸ್ಮರಿಸಿಕೊಂಡರು. “ಆ ದಿನಗಳಲ್ಲಿ ನನಗೆ ಶಾರುಖ್ ನೆನಪಾಗುತ್ತಾರೆ. ಅವರಿಗೆ ಮುಂಬೈನಲ್ಲಿ ಮನೆ ಇರಲಿಲ್ಲ, ಆದ್ದರಿಂದ ಅವರು ದೆಹಲಿಯಿಂದ ಬರುತ್ತಿದ್ದರು. ಅವರಿಗೆ ಅಡುಗೆ ಮಾಡಲೂ ಯಾರೂ ಇರಲಿಲ್ಲ ಮತ್ತು ಅವರು ಎಲ್ಲಿ ಉಳಿದುಕೊಂಡಿದ್ದರು ಎಂದು ನನಗೆ ಖಚಿತವಿಲ್ಲ. ಅವರು ಸಿನಿಮಾ ಸೆಟ್ ನಲ್ಲೇ ಊಟ ಮಾಡುತ್ತಿದ್ದರು. ಸಿನಿಮಾ ಸೆಟ್ ನಲ್ಲೇ ಟೀ ಕುಡಿಯುತ್ತಿದ್ದರು. ಮತ್ತು ಸೆಟ್ ನಲ್ಲಿದ್ದವರೊಂದಿಗೆ ತಮಾಷೆ ಮಾಡುತ್ತಾ ಮಾತನಾಡುತ್ತಿದ್ದರು. ಅವರ ಬಳಿ ಒಂದು ಕಾರು ಇತ್ತು. ಅದು ಕಪ್ಪು ಬಣ್ಣದ ಜಿಪ್ಸಿ ಎಂದು ನನಗೆ ನೆನಪಿದೆ. ಅವರು ಎರಡು ಅಥವಾ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ನನ್ನೊಂದಿಗೆ ರಾಜು ಬನ್ ಗಯಾ ಜೆಂಟಲ್ ಮ್ಯಾನ್ ಚಿತ್ರ ಮಾಡ್ತಿದ್ದರೆ ಮತ್ತೊಂದೆಡೆ ದಿಲ್ ಆಶ್ನಾ ಹೈ ಚಿತ್ರ ಮಾಡ್ತಿದ್ದರು ಮತ್ತು ದಿವ್ಯಾ ಜೊತೆಯಲ್ಲಿ ಮತ್ತೊಂದು ಚಿತ್ರ ಮಾಡುತ್ತಿದ್ದರು. ಆದರೆ ಕೆಲವು ಕಾರಣಗಳಿಂದಾಗಿ ಶಾರುಖ್ ತನ್ನ ಕಾರಿಗೆ ಇಎಂಐ ಪಾವತಿಸಲು ಸಾಧ್ಯವಾಗಲಿಲ್ಲ, ಹಾಗಾಗಿ ಬ್ಯಾಂಕ್ ನವರು ಕಾರ್ ತೆಗೆದುಕೊಂಡು ಹೋದರು. ಆಗ ಅವನ ಬಳಿ ಏನೂ ಇರಲಿಲ್ಲ” ಎಂದು ಸ್ಮರಿಸಿದ್ದಾರೆ.
ಮಾತು ಮುಂದುವರೆಸಿದ ಜೂಹಿ “ಆ ದಿನ ಅವರು ತುಂಬಾ ನಿರಾಶೆಯಿಂದ ಸೆಟ್‌ಗೆ ಬಂದರು. ಆಗ ನಾನು ಅರೆ ಈ ಬಗ್ಗೆ ಚಿಂತಿಸಬೇಡ. ನಿನಗೆ ಇನ್ನೂ ಹಲವು ಕಾರು ಬರುತ್ತವೆ. ನೀನು ನೋಡುತ್ತಿರು ಏನೂ ಆಗಲ್ಲ ಎಂದಿದ್ದೆ. ಅದನ್ನು ಶಾರುಖ್ ಈಗಲೂ ನೆನಪಿಸಿಕೊಳ್ಳುತ್ತಾರೆ. ಈಗ ನೋಡಿ ಶಾರುಖ್ ಖಾನ್ ಬಾಲಿವುಡ್ ನಲ್ಲಿ ಯಾವ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು. 2015 ರಲ್ಲಿ ಜೂಮ್ ಟಿವಿಯೊಂದಿಗೆ ಮಾತನಾಡಿದ ಶಾರುಖ್ ಸಹ ಈ ಘಟನೆಯನ್ನು ನೆನಪಿಸಿಕೊಂಡಿದ್ದರು.
“ರಾಜು ಬನ್ ಗಯಾ ಜೆಂಟಲ್‌ಮ್ಯಾನ್ ಚಿತ್ರೀಕರಣದ ಸಮಯದಲ್ಲಿ ನಾನು ಖರೀದಿಸಿದ ನನ್ನ ಮೊದಲ ಜೀಪ್ ಅನ್ನು ಹಣ ಪಾವತಿಸದ್ದಕ್ಕೆ ಬ್ಯಾಂಕ್ ಸ್ವಾಧೀನಪಡಿಸಿಕೊಂಡಿತು. ಉಳಿದ ಚಿತ್ರೀಕರಣಕ್ಕಾಗಿ ಜೂಹಿ ಚಾವ್ಲಾ ನನಗೆ ಅವರ ಕಾರನ್ನು ಕೊಟ್ಟರು. ವರ್ಷಗಳ ನಂತರ ತ್ರಿಮೂರ್ತಿ ಚಿತ್ರದ ಚಿತ್ರೀಕರಣಕ್ಕಾಗಿ ಗಿರಿಧಾಮದಲ್ಲಿದ್ದಾಗ ನಾನು ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನನಗೆ ಆ ಕಾರ್ ಪರಿಚಯವಿದ್ದಂತೆ ಕಂಡಿತು. ನನ್ನಿಂದ ಪಡೆದ ಕಾರನ್ನು ಬ್ಯಾಂಕ್ ಮಾರಾಟ ಮಾಡಿದ್ದು ಅದನ್ನು ಖರೀದಿಸಿದ್ದ ಜೂಹಿ ಕಾರ್ ತನಗೆ ನೀಡಿದ್ದರೆಂದು ಸ್ಪಷ್ಟವಾಯಿತು ಎಂದಿದ್ದರು. ನಾನು ಆ ಕಾರ್ ನಲ್ಲಿ ಜಾಕಿ ಶ್ರಾಫ್ ಜೊತೆ ಪ್ರಯಾಣಿಸುತ್ತಿದ್ದೆ ಎಂಬುದನ್ನೂ ಶಾರುಖ್ ಸ್ಮರಿಸಿದ್ದರು.