ಬಹುನಿರೀಕ್ಷಿತ ʼಜವಾನ್ʼ ಸಿನಿಮಾದ ಮೊದಲ ಗೀತೆ ʼಜಿಂದಾ ಬಂದಾʼ ರಿಲೀಸ್ಗೂ ಮುನ್ನವೇ ಸಿನಿಮಾ ತಯಾರಕರು ಈ ಸಿನಿಮಾದ ಗೀತೆ ಎಷ್ಟು ಗ್ರ್ಯಾಂಡ್ ಆಗಿ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಶಾರೂಕ್ ಖಾನ್ ಈ ಸಾಂಗ್ನಲ್ಲಿ ಸಾವಿರಾರು ಮಹಿಳಾ ನರ್ತಕರೊಂದಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ನೃತ್ಯ ಸಂಯೋಜಕ ಅನಿರುದ್ಧ ಮಾಹಿತಿ ನೀಡಿದ್ದಾರೆ. ಜಿಂದಾ ಬಂದಾ ಬಿಡುಗಡೆಗೂ ಮುನ್ನವೇ ಎಷ್ಟು ಗ್ರ್ಯಾಂಡ್ ಇರಲಿದೆ ಎಂಬ ಊಹಾಪೋಹಗಳು ಇಂಟರ್ನೆಟ್ನಲ್ಲಿ ತುಂಬಿ ಥುಳುಕುತ್ತಿದೆ.
ಸಿನಿಮಾದ ಆಪ್ತ ಮೂಲಗಳ ಪ್ರಕಾರ, ಚೆನ್ನೈ, ಹೈದರಾಬಾದ್, ಬೆಂಗಳೂರು, ಮುಂಬೈ, ಮಧುರೈ ಹಾಗೂ ಹೆಚ್ಚಿನ ನಗರಗಳಲ್ಲಿ 1000ಕ್ಕೂ ಹೆಚ್ಚು ನೃತ್ಯಗಾರರನ್ನು ಬಳಸಿ ಈ ಸಿನಿಮಾದ ಗೀತೆಗೆ ಶೂಟಿಂಗ್ ನಡೆಸಲಾಗಿದೆ. ಐದು ದಿನಗಳ ಹಿಂದೆ ಚೆನ್ನೈನಲ್ಲಿ ಬೃಹತ್ ಪ್ರಮಾಣದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಸಿನಿಮಾ ತಂಡ ಮಾಹಿತಿ ನೀಡಿದೆ. 15 ಕೋಟಿಗೂ ಅಧಿಕ ಖರ್ಚು ಮಾಡಿ ಈ ಸಾಂಗ್ ಚಿತ್ರೀಕರಣ ನಡೆಸಲಾಗ್ತಿದ್ದು, ಜಿಂದಾ ಬಂದಾ ಗೀತೆಯಲ್ಲಿ ಶಾರೂಕ್ ಸಾವಿರಾರು ಯುವತಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ.
ಕಿಂಗ್ ಖಾನ್ ತಮ್ಮ ಎನರ್ಜಿ ಮೂಲಕವೇ ಪ್ರೇಕ್ಷಕರನ್ನು ರಂಜಿಸುತ್ತಾರೆ. ಅಟ್ಲಿ ನಿರ್ದೇಶನದ ಈ ಸಿನಿಮಾದಲ್ಲಿ ನಯನತಾರಾ ಹಾಗೂ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿದ್ದಾರೆ. ದೀಪಿಕಾ ಪಡುಕೋಣೆ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಕಲಾವಿದರಾದ ಸಾನ್ಯಾ ಮಲ್ಹೋತ್ರಾ, ಪ್ರಿಯಾ ಮಣಿ, ಗಿರಿಜಾ ಓಕ್, ಸಂಜಿತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ, ಡೋಗ್ರಾ, ಸುನೀಲ್ ಗ್ರೋವರ್ ಹಾಗೂ ಮುಖೇಶ್ ಛಾಬ್ರಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.