ಬಹಳ ದಿನಗಳಿಂದ ಗುಮಾನಿಯಲ್ಲಿದ್ದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್‌ರ ಪ್ರೇಮಪ್ರಣಯ ಡಿಸೆಂಬರ್‌ನಲ್ಲಿ ವಿವಾಹದೊಂದಿಗೆ ಅಂತ್ಯಗೊಳ್ಳಲಿದೆ.
ರಾಜಸ್ಥಾನದ ಸವಾಯ್ ಮಧೋಪುರದ ಸಿಕ್ಸ್ ಸೆನ್ಸಸ್ ಫೋರ್ಟ್ ಬರವಾರಾದಲ್ಲಿ ಇಬ್ಬರೂ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. 200ರಷ್ಟು ಅತಿಥಿಗಳು ವಿವಾಹ ಸಮಾರಂಭದಲ್ಲಿ ಹಾಜರಿರಲಿದ್ದಾರೆ.
ಮದುವೆಗೆ ಆಮಂತ್ರಣ ನೀಡಲಾದ ಕೆಲವೇ ಅತಿಥಿಗಳಲ್ಲಿ ಶಾರುಖ್ ಖಾನ್ ಸಹ ಒಬ್ಬರಾಗಿದ್ದಾರೆ ಎನ್ನಲಾಗಿದೆ. ಕತ್ರಿನಾ ಹಾಗೂ ವಿಕ್ಕಿ ಇಬ್ಬರೂ ಶಾರುಖ್ ಅಭಿಮಾನಿಗಳಾದ ಕಾರಣ ಇಬ್ಬರನ್ನೂ ತಮ್ಮ ಮದುವೆಗೆ ಆಮಂತ್ರಿಸಿದ್ದಾರೆ ಎಂದು ಬಾಲಿವುಡ್ ಲೈಫ್ ತಿಳಿಸಿದೆ.
ಅಂಧ ಬಾಲಕನ ರಾಜ್ಯ ಗೀತೆಗೆ ಮನಸೋತ ಛತ್ತೀಸ್ ಗಢ ಸಿಎಂ…!
3-4 ದಿನಗಳ ಕಾಲ ನಡೆಯಲಿರುವ ಈ ವಿವಾಹ ಸಮಾರಂಭದಲ್ಲಿ ಶಾರುಖ್ ಕೆಲ ಕ್ಷಣಗಳ ಮಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ’ಜಬ್ ತಕ್ ಹೈ ಜಾನ್’ ಹಾಗೂ ’ಜ಼ೀರೋ’ ಚಿತ್ರಗಳಲ್ಲಿ ಶಾರುಖ್ ಖಾನ್ ಜೊತೆಗೆ ಕತ್ರಿನಾ ಕೈಫ್ ತೆರೆ ಹಂಚಿಕೊಂಡಿದ್ದಾರೆ.
ವರದಿಗಳು ಸತ್ಯವಾದಲ್ಲಿ, ಪುತ್ರ ಆರ್ಯನ್ ಖಾನ್‌ನ ಡ್ರಗ್ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.