
2021 ರ ಕೊನೆಯಲ್ಲಿ, ಅಶೋಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಅಶ್ವಿನಿ ದೇಶಪಾಂಡೆ ಟ್ವಿಟರ್ ನಲ್ಲಿ ಈ ವಿಭಿನ್ನ ಘಟನೆಯ ಬಗ್ಗೆ ಬಹಿರಂಗಪಡಿಸಿದ್ದರು. ಈಜಿಪ್ಟ್ ಗೆ ವೆಕೇಷನ್ ಗೆ ಹೋಗಿದ್ದ ಅವರು, ಟ್ರಾವೆಲ್ ಏಜೆಂಟ್ ಒಬ್ಬರಿಗೆ ಮುಂಗಡವಾಗಿ ಹಣ ಪಾವತಿಸಬೇಕಿತ್ತು. ಆದರೆ ಕೆಲ ಟೆಕ್ನಿಕಲ್ ತೊಂದರೆಗಳಿಂದ ಹಣ ಕಳುಹಿಸಲು ಆಗಲಿಲ್ಲ. ಆದರೆ ಆ ಏಜೆಂಟ್ ಶಾರುಖ್ ಖಾನ್ ಅಭಿಮಾನಿಯಾಗಿದ್ದರಿಂದ, ಅಶ್ವಿನಿಯವರು ಭಾರತದವರಾಗಿದ್ದರಿಂದ ಮುಂಗಡ ಹಣ ಪಡೆದುಕೊಳ್ಳದೆ ಟಿಕೆಟ್ ಕಾಯ್ದಿರಿಸಿದ್ದರು. ಅಷ್ಟೇ ಅಲ್ಲಾ ಬೇರೆ ಯಾವ ದೇಶದವರಾಗಿದ್ದರು ನಾನು ಈ ಸಹಾಯ ಮಾಡುತ್ತಿರಲಿಲ್ಲ, ಆದರೆ ನೀವು ನನ್ನ ಪ್ರೀತಿಯ ನಟ ಶಾರುಖ್ ದೇಶದವರು. ನೀವು ನಿಮ್ಮ ದೇಶಕ್ಕೆ ಮರಳಿದ ನಂತರ ಹಣ ಪಾವತಿಸಬಹುದು ಎಂದು ಹೇಳಿ ಸಹಾಯ ಮಾಡಿದ್ದರೆಂದು ಅಶ್ವಿನಿ ಟ್ವೀಟ್ ಮಾಡಿದ್ದರು. ಅಲ್ಲದೇ ಆ ಟ್ರಾವೆಲ್ ಏಜೆಂಟ್ ಅವ್ರೊಂದಿಗಿನ ಫೋಟೊ ಪೋಸ್ಟ್ ಮಾಡಿ ಶಾರುಖ್ ಅವ್ರನ್ನು ಟ್ಯಾಗ್ ಮಾಡಿದ್ದರು. ಈಗ ಆ ಅಭಿಮಾನಿಗೆ ಶಾರುಖ್ ಉಡುಗೊರೆ ಮೂಲಕ ಅಭಿಮಾನಿಯ, ಅಭಿಮಾನಕ್ಕೆ ಧನ್ಯವಾದ ತಿಳಿಸಿದ್ದಾರೆ.
ಉಡುಗೊರೆಗಳ ತಲುಪಿದ ಬಗ್ಗೆ ಟ್ವೀಟ್ ಮಾಡಿರುವ ಅಶ್ವಿನಿಯವರು, ಈ ಕಥೆ ಈಗ ಅದ್ಭುತವಾಗಿ ಕೊನೆಗೊಂಡಿದೆ. ಶಾರುಖ್ ಅವರು ತಮ್ಮ ಇಜಿಪ್ಟ್ ಅಭಿಮಾನಿಗೆ ಅದ್ಭುತ ಸಂದೇಶ ಬರೆದು ಕಳುಹಿಸಿದ್ದಾರೆ ಎಂದು ಶಾರುಖ್ ಗೆ ಧನ್ಯವಾದ ತಿಳಿಸಿದ್ದಾರೆ. ಶಾರುಖ್ ನಡೆಯನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ.