ಶಾರುಖ್ ಖಾನ್ ಅವರ ಪಠಾಣ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು, ಭರ್ಜರಿ ಕಲೆಕ್ಷನ್ ಮಾಡಿದೆ. ಬಾಕ್ಸ್ ಆಫೀಸ್‌ನಲ್ಲಿ 107 ಕೋಟಿ ರೂ. ಸಂಗ್ರಹಿಸಿ ದಾಖಲೆ ಬರೆದಿತ್ತು. ಇದೀಗ ಬಿಡುಗಡೆಯಾದ ನಾಲ್ಕು ದಿನಗಳಲ್ಲಿಯೇ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿ ರೂ. ಗಳಿಸಿದೆ.
ಜನವರಿ 25ರಂದು ತೆರೆ ಕಂಡ ಚಿತ್ರ, ಇದೀಗ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ 400 ಕೋಟಿ ರೂ.ಗೂ ಅಧಿಕ ಗಳಿಕೆ ಕಾಣುವ ಮೂಲಕ ಅತ್ಯಂತ ವೇಗವಾಗಿ 400 ಕೋಟಿ ಕ್ಲಬ್‌ಗೆ ಸೇರಿದ ಬಾಲಿವುಡ್ ಚಲನಚಿತ್ರವಾಗಿದೆ. ಇದರ ಯಶಸ್ಸನ್ನು ಆಚರಿಸಲು ಖುದ್ದು ಶಾರುಖ್ ಖಾನ್ ಅವರು ನೃತ್ಯ ಮಾಡಿದ್ದಾರೆ. ಚಿತ್ರದ ಜೂಮ್ ಜೋ ಪಠಾಣ್ ಹಾಡಿಗೆ ಶಾರುಖ್ ಖಾನ್ ನರ್ತಿಸಿದ್ದು ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.
ಲಲಿತಾ ತಿವಾರಿ ಎನ್ನುವವರು ಇದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಟ್ವಿಟರ್ನಲ್ಲಿ ಶೇರ್ ಆಗಿರುವ ಕಿರು ವಿಡಿಯೋದಲ್ಲಿ ಶಾರುಖ್ ಅವರು ಹಿನ್ನೆಲೆ ಹಾಡಿಗೆ ನೃತ್ಯ ಮಾಡುವುದನ್ನು ನೋಡಬಹುದು. ಇನ್ನೊಂದೆಡೆಯಲ್ಲಿ ಅಭಿಮಾನಿಗಳು ಕೂಡ ಹಾಡಿಗೆ ಡಾನ್ಸ್ ಮಾಡುವುದನ್ನು ನೋಡಬಹುದಾಗಿದೆ.
ಸಿನಿಮಾ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ಪಠಾಣ್ ಸಿನಿಮಾ ನಾಲ್ಕು ದಿನಗಳಲ್ಲಿ 429 ಕೋಟಿ ರೂಪಾಯಿ ಗಳಿಸಿದೆ. ಈ ಪೈಕಿ ಭಾರತದಲ್ಲಿ 265 ಕೋಟಿ ರೂ. ಮತ್ತು ಜಾಗತಿಕವಾಗಿ 164 ಕೋಟಿ ರೂ. ಗಳಿಸಿದೆ ಓವರ್‌ಸೀಸ್‌ನಲ್ಲಿ 112 ಕೋಟಿ ರೂಪಾಯಿ, ಒಟ್ಟಾರೆ 429 ಕೋಟಿ ರೂ. ಎಂದಿದ್ದಾರೆ.