ಇಂಗ್ಲೆಂಡ್ ಮಹಿಳೆಯರ ತಂಡದ ವಿರುದ್ಧ ಏಕದಿನ ಕ್ರಿಕೆಟ್ ಸರಣಿಗೆ ಭಾರತದ ವನಿತೆಯರ ತಂಡಕ್ಕೆ ಆಯ್ಕೆಯಾದ ಶೆಫಾಲಿ ವರ್ಮಾ ವಿಶಿಷ್ಟ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.
ತಮ್ಮ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದು 14 ಎಸೆತಗಳಲ್ಲಿ 15 ರನ್ ಗಳಿಸಿದ ಶೆಫಾಲಿ, 17 ವರ್ಷ 150 ದಿನಗಳ ವಯಸ್ಸಿನಲ್ಲಿ ಕ್ರಿಕೆಟ್ನ ಎಲ್ಲಾ ಮಾದರಿಗಳಲ್ಲೂ ಪಾದಾರ್ಪಣೆ ಮಾಡಿದ ದಾಖಲೆ ಮಾಡಿದ್ದಾರೆ.
340 ಪ್ರಾಧ್ಯಾಪಕರ ನೇಮಕಾತಿ, ಸರ್ಕಾರದ ಅನುಮತಿ
ಈ ಗೌರವಕ್ಕೆ ಪಾತ್ರರಾದ ಭಾರತದ ಅತ್ಯಂತ ಕಿರಿಯ ಕ್ರಿಕೆಟರ್ ಆದ ಶೆಫಾಲಿ, ಒಟ್ಟಾರೆ ಐದನೇ ಅತ್ಯಂತ ಕಿರಿಯ ಕ್ರಿಕೆಟರ್ ಆಗಿದ್ದಾರೆ. ಅಫ್ಘಾನಿಸ್ತಾನದ ಮುಜೀಬುರ್ ರಹಮಾನ್ 17 ವರ್ಷ 78 ದಿನಗಳ ವಯಸ್ಸಾಗಿದ್ದ ವೇಳೆ ಕ್ರಿಕೆಟ್ನ ಎಲ್ಲಾ ಮಾದರಿಗಳಲ್ಲೂ ಅಂತಾರಾಷ್ಟ್ರೀಯ ವೇದಿಕೆಗೆ ಪಾದಾರ್ಪಣೆ ಮಾಡಿದ್ದರು.
ಪ್ರವಾಸ ಪ್ರಿಯರಿಗೆ ಇಲ್ಲಿದೆ ‘ಗುಡ್ ನ್ಯೂಸ್’
ಕಳೆದ ವಾರ ಟೆಸ್ಟ್ಗೆ ಪಾದಾರ್ಪಣೆ ಮಾಡಿದ ಶೆಫಾಲಿ, ಪಂದ್ಯದ ಇನಿಂಗ್ಸ್ನಲ್ಲಿ 96 ಹಾಗೂ ಎರಡನೇ ಇನಿಂಗ್ಸ್ನಲ್ಲಿ 63 ರನ್ ಗಳಿಸಿ ಅದ್ಧೂರಿಯಾಗಿ ಆಡಿದ್ದರು. ಇದುವರೆಗೂ 22 ಟಿ20 ಪಂದ್ಯಗಳನ್ನು ಆಡಿರುವ ಶೆಫಾಲಿ 617 ರನ್ಗಳಿಸಿದ್ದಾರೆ.