ಶಬಾನಾ ಅಜ್ಮಿ, ಜಾವೇದ್ ಅಖ್ತರ್ ಮತ್ತು ನಾಸಿರುದ್ದೀನ್ ಶಾ ಅವರು ತುಕ್ಡೆ-ತುಕ್ಡೆ ಗ್ಯಾಂಗ್ನ ಸ್ಲೀಪರ್ ಸೆಲ್ಗಳು ಎಂದು ಸಚಿವರೊಬ್ಬರು ನೀಡಿದ ಹೇಳಿಕೆ ವಿವಾದವೆಬ್ಬಿಸಿದೆ.
ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಬಿಡುಗಡೆ ಕುರಿತು ಮಾತನಾಡುವಾಗ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಈ ಹೇಳಿಕೆ ನೀಡಿದ್ದಾರೆ. ನಟಿ ಶಬಾನಾ ಅಜ್ಮಿ ದೂರದರ್ಶನ ಸಂದರ್ಶನದಲ್ಲಿ ತಿರುಗಿಬಿದ್ದ ನಂತರ ಗೃಹ ಸಚಿವರ ಈ ಹೇಳಿಕೆ ಬಂದಿದೆ.
ಈ ಶಬಾನಾ ಅಜ್ಮಿ, ಜಾವೇದ್ ಅಖ್ತರ್ ಮತ್ತು ನಾಸಿರುದ್ದೀನ್ ಶಾ ತುಕ್ಡೆ ತುಕ್ಡೆ ಗ್ಯಾಂಗ್ನ ಸ್ಲೀಪರ್ ಸೆಲ್ಗಳು. ರಾಜಸ್ಥಾನದಲ್ಲಿ ಕನ್ಹಯ್ಯಾ ಲಾಲ್ನ ಶಿರಚ್ಛೇದವಾದಾಗ ಏನನ್ನೂ ಹೇಳಲಿಲ್ಲ. ಜಾರ್ಖಂಡ್ನಲ್ಲಿ ಹೆಣ್ಣು ಮಗಳಿಗೆ ಬೆಂಕಿ ಹಚ್ಚಲಾಗಿದೆ. ಆದರೆ ಅವರು ಏನಾದರೂ ಹೇಳಿದ್ದಾರಾ ? ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಏನಾದರೂ ಸಂಭವಿಸಿದಾಗ ಮಾತ್ರ ಅವರು ಹೇಳಿಕೆಗಳನ್ನು ನೀಡುತ್ತಾರೆ ಎಂದು ನರೋತ್ತಮ್ ಮಿಶ್ರಾ ವಾಗ್ದಾಳಿ ನಡೆಸಿದರು.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಏನಾದರೂ ಸಂಭವಿಸಿದಾಗ ನಾಸಿರುದ್ದೀನ್ ಶಾ ಈ ದೇಶದಲ್ಲಿ ಉಳಿಯಲು ಹೆದರುತ್ತಾರೆ ಎಂದು ಲೇವಡಿ ಮಾಡಿದ ಅವರು ಪ್ರಶಸ್ತಿ-ವಾಪ್ಸಿ ಗ್ಯಾಂಗ್ ಇದೆ, ಅವರೆಲ್ಲ ಇಂತಹ ಸಂದರ್ಭದಲ್ಲಿ ಸಕ್ರಿಯರಾಗುತ್ತಾರೆ ಮತ್ತು ತಮ್ಮ ಉಸಿರನ್ನು ಹೊರಹಾಕುತ್ತಾರೆ. ಅವರು ಹೇಗೆ ಜಾತ್ಯತಿತರು ಎಂದು ಹೇಳಿಕೊಳ್ಳುತ್ತಾರೆ. ಈಗ ಎಲ್ಲರಿಗೂ ಈ ವ್ಯಕ್ತಿಗಳ ಸತ್ಯಾಸತ್ಯತೆ ತಿಳಿದಿದೆ ಎಂದು ಮಿಶ್ರಾ ಟೀಕಾ ಪ್ರಹಾರ ನಡೆಸಿದರು.
ಈ ಮುನ್ನ ಸಂದರ್ಶನವೊಂದರಲ್ಲಿ ನಟಿ ಶಬಾನಾ ಅಜ್ಮಿ ಗ್ಯಾಂಗ್ರೇಪ್ ಅಪರಾಧಿಗಳ ಬಿಡುಗಡೆಯ ಕುರಿತು ಮಾತನಾಡುವಾಗ ಸಿಕ್ಕಾಪಟೆ ಟೀಕಿಸಿದ್ದರು. ಈ ದೇಶದಲ್ಲಿ ಅಸುರಕ್ಷಿತ ಭಾವನೆ ಅನುಭವಿಸುತ್ತಿರುವ ಮಹಿಳೆಯರು, ದಿನನಿತ್ಯದ ಅತ್ಯಾಚಾರದ ಬೆದರಿಕೆ ಎದುರಿಸುತ್ತಿರುವ ಮಹಿಳೆಯರು ಸ್ವಲ್ಪ ಸುರಕ್ಷತೆಯ ಭಾವನೆಯನ್ನು ಪಡೆಯಬೇಕಲ್ಲವೇ? ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ನಾನು ಏನು ಉತ್ತರಿಸಲಿ? ಬಿಲ್ಕಿಸ್ಗೆ ನಾನು ಏನು ಹೇಳಬಲ್ಲೆ? ಎಂದು ನನಗೆ ನಾಚಿಕೆಯಾಗುತ್ತಿದೆ ಎಂದು ನಟಿ ಹೇಳಿದ್ದರು.