alex Certify ಬಲವಂತದಿಂದ ಪತ್ನಿ ಜೊತೆ ನಡೆಸುವ ಲೈಂಗಿಕ ಸಂಭೋಗ ಅತ್ಯಾಚಾರವಲ್ಲ: ಛತ್ತೀಸಗಢ ಹೈಕೋರ್ಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲವಂತದಿಂದ ಪತ್ನಿ ಜೊತೆ ನಡೆಸುವ ಲೈಂಗಿಕ ಸಂಭೋಗ ಅತ್ಯಾಚಾರವಲ್ಲ: ಛತ್ತೀಸಗಢ ಹೈಕೋರ್ಟ್​

ಕಾನೂನು ಬದ್ಧವಾಗಿ ವಿವಾಹವಾದ ಪುರುಷ ಹಾಗೂ ಮಹಿಳೆ ನಡುವೆ ನಡೆಯುವ ಲೈಂಗಿಕ ಕ್ರಿಯೆಯು ಪತ್ನಿಯ ಇಚ್ಛೆಗೆ ವಿರುದ್ಧವಾಗಿದ್ದರೂ ಸಹ ಅದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಛತ್ತೀಸಗಢ ಹೈಕೋರ್ಟ್ ತೀರ್ಪು ನೀಡಿದೆ. ಈ ಮೂಲಕ ಪತ್ನಿಯಿಂದ ಅತ್ಯಾಚಾರದ ಆರೋಪ ಎದುರಿಸುತ್ತಿದ್ದ ಪತಿ ಸಜೆಯಿಂದ ಮುಕ್ತನಾಗಿದ್ದಾನೆ.

ವೈವಾಹಿಕ ಅತ್ಯಾಚಾರ ಪ್ರಕರಣ ಸಂಬಂಧ ವಾದ – ವಿವಾದಗಳನ್ನು ಆಲಿಸಿದ ಛತ್ತೀಸಗಢ ಹೈಕೋರ್ಟ್, 18 ವರ್ಷ ಮೇಲ್ಪಟ್ಟ ಮಹಿಳೆಯ ಜೊತೆ ಆಕೆಯ ಪತಿ ನಡೆಸುವ ಲೈಂಗಿಕ ಸಂಭೋಗವು ಯಾವುದೇ ಕಾರಣಕ್ಕೂ ಅತ್ಯಾಚಾರದ ವ್ಯಾಪ್ತಿಯಲ್ಲಿ ಬರೋದಿಲ್ಲ ಎಂದು ಹೇಳಿದೆ.

ಈ ಪ್ರಕರಣದಲ್ಲಿ ದೂರುದಾರ ಮಹಿಳೆಯು ಆರೋಪಿಯು ಕಾನೂನುಬದ್ಧ ಪತ್ನಿಯಾಗಿದ್ದಾರೆ. ಹೀಗಾಗಿ ಆರೋಪಿಯು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದರೂ ಅದನ್ನು ಅತ್ಯಾಚಾರ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೋರ್ಟ್​ ತನ್ನ ಆದೇಶದಲ್ಲಿ ತಿಳಿಸಿದೆ.

ಆರೋಪಿಯನ್ನು ವೈವಾಹಿಕ ಅತ್ಯಾಚಾರ ಆರೋಪದಿಂದ ಕೋರ್ಟ್ ಖುಲಾಸೆಗೊಳಿಸಿದ್ದರೂ ಸಹ ಐಪಿಸಿ ಸೆಕ್ಷನ್​ 377ರ ಅಡಿಯಲ್ಲಿ ಅಸಹಜ ಲೈಂಗಿಕ ಕ್ರಿಯೆ ನಡೆದಿದೆ ಎಂಬ ಆರೋಪಗಳನ್ನು ಎತ್ತಿ ಹಿಡಿದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...