ದಾಂಪತ್ಯದಲ್ಲಿ ಲೈಂಗಿಕ ಜೀವನ ಮಹತ್ವದ ಪಾತ್ರ ವಹಿಸುತ್ತದೆ. ಆಹಾರ ಪದ್ಧತಿ ಮತ್ತು ಜೀವನಶೈಲಿ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಲೈಂಗಿಕ ಜೀವನ ಸುಖಕರವಾಗಿರಬೇಕೆಂದರೆ ಆಹಾರದ ಬಗ್ಗೆ ಗಮನ ನೀಡಬೇಕು. ಕೆಲ ಆಹಾರವನ್ನು ಸೇವನೆ ಮಾಡಬಾರದು.
ಲೈಂಗಿಕ ಆರೋಗ್ಯದ ಮೇಲೆ ಕಾಫಿ ಪರಿಣಾಮ ಬೀರುತ್ತದೆ. ಇದು ಪರುಷರಲ್ಲಿ ಒತ್ತಡದ ಹಾರ್ಮೋನ್ ಉತ್ಪಾದಿಸುತ್ತದೆ. ಹಾರ್ಮೋನ್ ಅಸಮತೋಲನದಿಂದ ಅನೇಕ ಸಮಸ್ಯೆ ಎದುರಾಗುತ್ತದೆ.
ಚೀಸ್ ಬಹಳಷ್ಟು ಕೊಬ್ಬನ್ನು ಹೊಂದಿದೆ. ಪುರುಷರು ಮತ್ತು ಮಹಿಳೆಯರಲ್ಲಿ ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ಮತ್ತು ಟೆಸ್ಟೋಸ್ಟೆರಾನ್ ನಂತಹ ಲೈಂಗಿಕ ಹಾರ್ಮೋನುಗಳ ಉತ್ಪಾದನೆ ನಿಲ್ಲುತ್ತದೆ. ಅತಿಯಾದ ಚೀಸ್ ಸೇವನೆ ಬೇಡ.
ಪುದೀನಾ ಆರೋಗ್ಯಕ್ಕೆ ಬಹಳ ಒಳ್ಳಯದು. ಬಾಯಿಯ ದುರ್ವಾಸನೆ ಸೇರಿದಂತೆ ಅನೇಕ ರೋಗಕ್ಕೆ ಇದು ರಾಮಬಾಣ. ಆದ್ರೆ ಪುದೀನಾದಲ್ಲಿರುವ ಮೆಂಥಾಲ್‌ನಿಂದ ಲೈಂಗಿಕ ಪ್ರಚೋದನೆಯಲ್ಲಿ ಇಳಿಕೆ ಕಂಡುಬರುತ್ತದೆ.
ಕಾರ್ನ್ ಫ್ಲೇಕ್ಸ್ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಇದು ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅನೇಕರು ಆಹಾರದ ನಂತ್ರ ಸೋಡಾ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಈ ಅಭ್ಯಾಸ ನಿಮಗೂ ಇದ್ದರೆ ಇಂದೇ ಬಿಡಿ. ಸೋಡಾ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುತ್ತದೆ.