alex Certify ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ : ಬಾಳೆಹೊನ್ನೂರು ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಥಳಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ : ಬಾಳೆಹೊನ್ನೂರು ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಥಳಿತ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ವೈದ್ಯಾಧಿಕಾರಿ ಡಾ.ಎಲ್ಡೋಸ್ ಕರ್ಮಕಾಂಡ ಬಯಲಾಗಿದೆ. ಮಹಿಳಾ ಸಿಬ್ಬಂದಿಯನ್ನು ಗೆಸ್ಟ್ ಹೌಸ್ ಗೆ ಕರೆದುಕೊಂಡು ಈ ಎಲ್ಡೋಸ್ ಲೈಂಗಿಕ ಕಿರುಕುಳ ನೀಡಿದ್ದಾನೆ. ಕೂಡಲೇ ಅಲ್ಲಿದ್ದ ಕುಟುಂಬದವರು , ಸ್ಥಳೀಯರು ಈತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಚೆನ್ನಾಗಿ ಚಚ್ಚಿದ್ದಾರೆ.

ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆ ವಸತಿ ಗೃಹದಲ್ಲಿ ವಾಸವಾಗಿದ್ದ ಎಲ್ಡೋಸ್ ಆಸ್ಪತ್ರೆಯ ಡಿ ಗ್ರೂಪ್ ಮಹಿಳಾ ಸಿಬ್ಬಂದಿಯನ್ನು ಗೆಸ್ಟ್ ಹೌಸ್ ಗೆ ಕರೆದಿದ್ದಾನೆ. ಈ ವಿಚಾರ ಗೊತ್ತಾದ ಮಹಿಳೆಯರ ಮನೆಯವರು ವಸತಿ ಗೃಹದ ಸುತ್ತಮುತ್ತಾ ಕಾದು ಕುಳಿತಿದ್ದರು.

ಮಹಿಳೆ ವಸತಿ ಗೃಹಕ್ಕೆ ಬರುತ್ತಿದ್ದಂತೆ ಎಲ್ಡೋಸ್ ಆಕೆಯನ್ನು ಕೂಡಿಹಾಕಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಈ ವೇಳೆ ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಹತ್ತಿರದಲ್ಲಿದ್ದ ಮನೆಯವರು, ಸ್ಥಳೀಯರು ಓಡಿ ಬಂದು ಎಲ್ಡೋಸ್ ನನ್ನು ನೆಲಕ್ಕೆ ಕೆಡವಿ ಥಳಿಸಿದ್ದಾರೆ. ವೈದ್ಯನ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಲ್ಲದೇ ಈತನ ವಿರುದ್ಧ ಈ ಹಿಂದೆಯೇ ಸಾಕಷ್ಟು ದೂರುಗಳು ಕೇಳಿಬಂದಿತ್ತು, ಆಸ್ಪತ್ರೆಗೆ ಬರುವ ರೋಗಿಗಳ ಜೊತೆ ಸರಿಯಾಗಿ ವರ್ತಿಸಲ್ಲ, ಸರಿಯಾಗಿ ಕರ್ತವ್ಯ ನಿರ್ವಹಿಸಲ್ಲ ಎಂಬ ಸಾಕಷ್ಟು ದೂರುಗಳು ಕೇಳಿಬಂದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...