ಮಲಯಾಳಂ ಚಿತ್ರೋದ್ಯಮದಿಂದ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದ್ದು, ಖ್ಯಾತ ನಟ-ಹಾಸ್ಯನಟ ಬಿನು ಬಿ ಕಮಲ್ ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧಿಸಲಾಗಿದೆ.
ವರದಿಗಳ ಪ್ರಕಾರ, ಕೆಎಸ್ಆರ್ ಟಿಸಿ ಬಸ್ ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 21 ವರ್ಷದ ಮಹಿಳೆ ದೂರು ನೀಡಿದ ನಂತರ ನಟನನ್ನು ವಟ್ಟಪಾರಾ ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಸಂಜೆ 4:30 ರ ಸುಮಾರಿಗೆ ಬಸ್ ತಂಪನೂರ್ ಮತ್ತು ನೀಲಮೇಳ ನಡುವೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಿನು ಬಸ್ನಲ್ಲಿ ಸಂತ್ರಸ್ತೆಯ ಪಕ್ಕದಲ್ಲಿ ಕುಳಿತು ಅವಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಮಹಿಳೆ ಗಲಾಟೆ ಮಾಡಿದಾಗ, ವಟ್ಟಪಾರಾ ಜಂಕ್ಷನ್ನಲ್ಲಿ ಬಸ್ ನಿಂತಾಗ ಬಿನು ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ. ಬಿನು ಬಿ ಕಮಲ್ ಓಡಿಹೋದರೂ, ಪ್ರಯಾಣಿಕರು ಮತ್ತು ಸ್ಥಳೀಯರು ಅವನನ್ನು ಬೆನ್ನಟ್ಟಿದರು ಎಂದು ತಿಳಿದು ಬಂದಿದೆ. ಸದ್ಯ ಖ್ಯಾತ ನಟ-ಹಾಸ್ಯನಟ ಬಿನು ಬಿ ಕಮಲ್ ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧಿಸಲಾಗಿದೆ.