ಬೆಂಗಳೂರು :ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಆತಂಕಕಾರಿಯಾಗಿದೆ. ಮೆಟ್ರೋ, ಬಸ್, ರಸ್ತೆ, ಪಾರ್ಕ್ ಗಳಲ್ಲಿ ಪುಂಡ ಕಾಮುಕರ ಅಟ್ಟಹಾಸ ಹೆಚ್ಚಳವಾಗುತ್ತಿದೆ. ಸಿಲಿಕಾನ್ ಸಿಟಿ ಹೆಣ್ಣು ಮಕ್ಕಳಿಗೆ ಸೇಫ್ ಅಲ್ಲವಾ ಎಂಬ ಪ್ರಶ್ನೆ ಮೂಡುತ್ತದೆ.
ಬೆಂಗಳೂರಿನ 30 ವರ್ಷದ ಟೆಕ್ಕಿಯೊಬ್ಬರು ಮಾರ್ಚ್ 17 ರಂದು ತನ್ನ ಮನೆಯೊಳಗೆ ಆಹಾರ ವಿತರಿಸುವ ಬಾಯ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಹತ್ತಿರದ ರೆಸ್ಟೋರೆಂಟ್ ನಿಂದ ಫುಡ್ ಅಗ್ರಿಗೇಟರ್ ಅಪ್ಲಿಕೇಶನ್ ಮೂಲಕ ಆರ್ಡರ್ ಮಾಡಿದ ನಂತರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಏನಿದು ಘಟನೆ
ವರದಿಯ ಪ್ರಕಾರ ಸಂಜೆ 6: 45 ಕ್ಕೆ ಟೆಕ್ಕಿಯ ಆರ್ಡರ್ ಬಂದಿದ್ದು, ಟೆಕ್ಕಿ ಡೆಲಿವರಿ ಆರ್ಡರ್ ಸ್ವೀಕರಿಸಿದ್ದಾರೆ. ನಂತರ ಡೆಲಿವರಿ ಬಾಯ್ ನೀರು ಕೇಳಿದ್ದಾನೆ ಎನ್ನಲಾಗಿದ್ದು, ಟೆಕ್ಕಿ ನೀರು ತರಲು ಹೋಗಿದ್ದಾರೆ. ಇದಾದ ಬಳಿಕ ಡೆಲಿವರಿ ಬಾಯ್ ಮಹಿಳೆಯ ಕೈ ಹಿಡಿದು ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿ ನೀರು ತರಲು ಹೋದಾಗ ಒಳಗೆ ನುಗ್ಗಿದ ಆಕಾಶ್ ಯುವತಿಯನ್ನು ಹಿಂಬಾಲಿಸಿ ಆಕೆಯ ಕೈ ಎಳೆದು ದೌರ್ಜನ್ಯ ಎಸಗಿದ್ದಾನೆ. ಬಳಿಕ ಟೆಕ್ಕಿ ಮಹಿಳೆ ಕೈಗೆ ಸಿಕ್ಕ ವಸ್ತುವಿನಿಂದ ಆತನ ಬೆನ್ನಿಗೆ ಹೊಡೆದಿದ್ದಾಳೆ…ಆತ ಸ್ಥಳದಿಂದ ಪರಾರಿಯಾದ ಎಂದು ಟೆಕ್ಕಿ ಹೇಳಿದ್ದಾರೆ. ಯುವತಿ ಹೆಚ್ಎಎಲ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ ಹಿನ್ನಲೆ ಐಪಿಸಿ ಸೆಕ್ಷನ್ 354 a ಅಡಿ ಎಫ್ಐಆರ್ ದಾಖಲಿಸಲಾಗಿದೆ.