ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ಎಫ್.ಟಿ.ಎಸ್.ಸಿ. ಮೂರನೇ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ನ್ಯಾ. ಎಸ್. ಮಹೇಶ್ ಅವರು ತೀರ್ಪು ನೀಡಿದ್ದಾರೆ. ಜೆಪಿ ನಗರದ 8ನೇ ಹಂತದ ನಿವಾಸಿ ಎಸ್. ಸುನಿಲ್(23) ಶಿಕ್ಷೆಗೊಳಗಾದ ಅಪರಾಧಿ. ಆತನಿಗೆ 20 ವರ್ಷ ಜೈಲು ಶಿಕ್ಷೆ, 50,000 ರೂ. ದಂಡ ವಿಧಿಸಲಾಗಿದೆ. ಸಂತ್ರಸ್ತ ಬಾಲಕಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ಪಬ್ಲಿಕ್ ಪ್ರಾಸಕ್ಯೂಟರ್ ಗೀತಾ ಗೊರವರ ಅವರು ವಾದ ಮಂಡಿಸಿದ್ದರು. 2022 ರಲ್ಲಿ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ ಸುನಿಲ್ 2023 ಫೆಬ್ರವರಿಯಲ್ಲಿ ಮನೆಗೆ ಕರೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ.