ಕೇರಳದ ವಿಭಾಗೀಯ ಪೀಠ ಅತ್ಯಾಚಾರದ ವ್ಯಾಖ್ಯಾನವನ್ನು ವಿಸ್ತರಣೆ ಮಾಡಿದೆ. ಸಂತ್ರಸ್ತೆಯ ತೊಡೆಗಳನ್ನು ಜೋಡಿಸಿ, ತೊಡೆಯ ಸಂಧಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ರೂ ಸಹ ಅದು ಅತ್ಯಾಚಾರವೇ ಆಗಿರುತ್ತದೆ ಎಂದು ಉಚ್ಛ ನ್ಯಾಯಾಲಯ ಹೇಳಿದೆ.
ಅತ್ಯಾಚಾರ ನಡೆಸುವ ಉದ್ದೇಶದಿಂದಲೇ ಆಕೆಯ ತೊಡೆಗಳನ್ನು ಒತ್ತಾಯದಿಂದ ಜೋಡಿಸಿ ಅಸಹಜ ಲೈಂಗಿಕ ಕ್ರಿಯೆಯನ್ನು ನಡೆಸಿದಲ್ಲಿ ಇದನ್ನೂ ಸಹ ಸೆಕ್ಷನ್ 375ರ ಅಡಿಯಲ್ಲಿ ಅತ್ಯಾಚಾರವೆಂದೇ ಪರಿಗಣಿಸಲಾಗುತ್ತದೆ ಎಂದು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಹಾಗೂ ಜಿಯಾದ್ ರಹ್ಮಾನ್ ನೇತೃತ್ವದ ನ್ಯಾಯಪೀಠ ಹೇಳಿದೆ.
ನೆರೆಮನೆಯ ಅಪ್ರಾಪ್ತೆಯ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೊಳಪಟ್ಟಿದ್ದ ಆರೋಪಿಯು ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ. ಆದರೆ ಕೇರಳ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.