
ಮಂಗಳೂರು: ಎರಡು ವರ್ಷದ ಮಗುವನ್ನು ಅಪಹರಿಸಿದ ಕಾಮುಕರು ಲೈಂಗಿಕ ಕಿರುಕುಳ ನೀಡಿ ಬಳಿಕ ಫಿಶ್ ಟ್ಯಾಂಕ್ ಗೆ ಮಗು ಬಿಸಾಕಿ ಹೋಗಿರುವ ಹೀನ ಘಟನೆ ಮಂಗಳೂರಿನ ಪಾಂಡವೇಶ್ವರ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಫಿಶ್ ಕಟ್ಟಿಂಗ್ ಮಾಡುವ ಫ್ಯಾಕ್ಟರಿ ಬಳಿ ಬಿಹಾರ ಮೂಲದ ಕಾರ್ಮಿಕರು ವಾಸವಾಗಿದ್ದು, ಅವರ ಮಕ್ಕಳನ್ನು ನೋಡಿಕೊಳ್ಳಲು ಕ್ಯಾಂಪ್ ಕೂಡ ಇದೆ. ಕ್ಯಾಂಪ್ ನಲ್ಲಿದ್ದ ಮಗುವನ್ನು ಅಪಹರಿಸಿದ ಕಿರಾತಕರು ಮಗುವಿಗೆ ಲೈಂಗಿಕ ಕಿರುಕುಳ ನೀಡಿ, ಕೃತ್ಯದ ಬಳಿಕ ಫಿಶ್ ಕಟ್ಟಿಂಗ್ ಟ್ಯಾಂಕ್ ಗೆ ಬಿಸಾಕಿ ಪರಾರಿಯಾಗಿದ್ದಾರೆ.
ಫಿಶ್ ಟ್ಯಾಂಕ್ ನಲ್ಲಿ ಮಗು ಉಪ್ಪು ನೀರು ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದು, ಮಗುವಿನ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದೆ. ವೆನಲಾಕ್ ಆಸ್ಪತ್ರೆಗೆ ದಾಖಲಾಗಿರುವ ಮಗು ಸಾವು-ಬದುಕಿನ ನಡುವೆ ಹೋರಾಟ ನಡೆಸಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.