ಗೋವಾದ ಕಲಗುಂಟೆಯಲ್ಲಿ ಆರಂಭವಾಗಿದ್ದ ದೇಶದ ಮೊದಲ ಸೆಕ್ಸ್ ಆಟಿಕೆಗಳ ಅಂಗಡಿಯನ್ನು ಬಂದ್ ಮಾಡಲಾಗಿದೆ.
ಅಂಗಡಿ ಇರುವ ಪ್ರದೇಶದ ಸ್ಥಳೀಯ ಪಂಚಾಯಿತಿಯಿಂದ ವ್ಯಾಪಾರ ನಡೆಸಲು ಅನುಮತಿ ಪಡೆಯದ ಕಾರಣ ಅಧಿಕಾರಿಗಳು ಆಟಿಕೆಗಳ ಅಂಗಡಿಯನ್ನು ಬಂದ್ ಮಾಡಿಸಿದ್ದಾರೆ. ಕಾಮ ಕಾರ್ಟ್ ಮತ್ತು ಗಿಜ್ಮೋವಾಲಾ ಕಂಪನಿಗಳು ಕಾಮಗಿಜ್ಮೋಸ್ ಹೆಸರಿನಲ್ಲಿ ಮಳಿಗೆ ತೆರೆದಿದ್ದವು. ಸ್ಥಳೀಯ ನಿವಾಸಿಗಳು ಸೆಕ್ಸ್ ಆಟಿಕೆಗಳ ಮಾರಾಟ ವಿರೋಧಿಸಿ ಪಂಚಾಯಿತಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಅಧಿಕಾರಿಗಳು ಅಂಗಡಿಯನ್ನು ಬಂದ್ ಮಾಡಿಸಿದ್ದಾರೆ.
ವ್ಯಾಪಾರ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದು ಕೆಲವೇ ದಿನಗಳಲ್ಲಿ ಅನುಮತಿ ಪತ್ರ ಪಡೆದು ಅಂಗಡಿಯನ್ನು ಮತ್ತೆ ಆರಂಭಿಸಲಾಗುವುದು ಎಂದು ಮಳಿಗೆಯ ಮುಖ್ಯಸ್ಥ ಪ್ರವೀಣ್ ಗಣೇಶನ್ ಹೇಳಿದ್ದಾರೆ.