ಒಂದು ವಯಸ್ಸಿನ ನಂತ್ರ ಪ್ರತಿಯೊಬ್ಬರ ದೇಹ, ಮನಸ್ಸು ಶಾರೀರಿಕ ಸಂಬಂಧ ಬೆಳೆಸುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿ ಕಡಿಮೆ ವಯಸ್ಸಿನಲ್ಲೇ ಸಂಬಂಧ ಬೆಳೆಸುವವರ ಸಂಖ್ಯೆ ಹೆಚ್ಚಾಗಿದೆ.
ಮೊದಲ ಬಾರಿ ಸಂಬಂಧ ಬೆಳೆಸುವ ಮೊದಲು ಅನೇಕ ವಿಷ್ಯಗಳನ್ನು ತಿಳಿದಿರಬೇಕಾಗುತ್ತದೆ. ಸಂಭೋಗ, ಆರೋಗ್ಯದ ಜೊತೆ ಮನಸ್ಸಿಗೆ ಹಿತ ನೀಡುವ ಸಂಗತಿ. ಆರಂಭದಲ್ಲಿಯೇ ಯಡವಟ್ಟಾದ್ರೆ ನಂತ್ರದ ದಿನಗಳು ಕಷ್ಟಕರವಾಗುತ್ತವೆ.
ಪೋರ್ನ್ ಚಿತ್ರಗಳನ್ನು ನೋಡುವ ಹುಡುಗ್ರ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಾರೆ. ಅದ್ರಲ್ಲಿ 40 ನಿಮಿಷಗಳ ಕಾಲ ಶಾರೀರಿಕ ಸಂಬಂಧ ಬೆಳೆಸಿದಂತೆ ತೋರಿಸಲಾಗುತ್ತದೆ.
ಸಂಶೋಧನೆಯೊಂದರ ಪ್ರಕಾರ, ಹಾಸಿಗೆಯಲ್ಲಿ ಪುರುಷ 3-5 ನಿಮಿಷ ಮಾತ್ರ ಸಂಭೋಗದಲ್ಲಿ ತೊಡಗುತ್ತಾನಂತೆ. ಇದು ಒಳ್ಳೆಯದು ಕೂಡ.
ಪೋರ್ ಪ್ಲೇ ಬಹಳ ಅಗತ್ಯ. ಬರೀ ಸಂಭೋಗದಿಂದ ಮಹಿಳೆ ಸುಖ ಪಡೆಯುವುದಿಲ್ಲ. ಪೋರ್ ಪ್ಲೇ ಬಹಳ ಮುಖ್ಯ ಎಂಬುದು ನೆನಪಿರಲಿ.
ರಿಯಲ್ ಬೇರೆ, ರೀಲ್ ಬೇರೆ. ಮೊದಲ ಸೆಕ್ಸ್ ಬಗ್ಗೆ ಎಲ್ಲರೂ ತಮ್ಮದೇ ರೀತಿಯಲ್ಲಿ ಕನಸು ಕಾಣ್ತಾರೆ. ಆದ್ರೆ ಅದ್ರಂತೆ ಆಗಬೇಕೆಂದೇನಿಲ್ಲ. ಇದಕ್ಕೆ ನಿರಾಶೆಗೊಳ್ಳುವ ಅಗತ್ಯವಿಲ್ಲ.
ಮೊದಲೊಂದೇ ಅಲ್ಲ ಪ್ರತಿ ಬಾರಿ ಸಂಭೋಗದ ವೇಳೆಯೂ ಒಂದೇ ಒಂದು ಕಾಂಡೋಮ್ ಬಳಸಿ. ಎರಡು ಬಳಸಿ ಒಂದು ಯೋನಿಯಲ್ಲಿ ಸಿಕ್ಕಿಬಿದ್ರೆ ಕಷ್ಟ.
ಮುಟ್ಟಿನ ಸಮಯದಲ್ಲಿ ಸುರಕ್ಷತೆ ಬಳಸದೆ ಸಂಭೋಗ ನಡೆಸಬಹುದೆಂದು ಅನೇಕರು ನಂಬಿದ್ದಾರೆ. ಆದ್ರೆ ಅದು ತಪ್ಪು. ಸೋಂಕನ್ನು ಇದು ಹೆಚ್ಚು ಮಾಡುತ್ತದೆ. ಜೊತೆಗೆ ಗರ್ಭಧಾರಣೆ ಸಾಧ್ಯತೆಯೂ ಇರುತ್ತದೆ.