ನೋಯ್ಡಾ: ಪೊಲೀಸ್ ಇಲಾಖೆ ಮಾನವ ಕಳ್ಳ ಸಾಗಣೆ ತಡೆ ಘಟಕದಿಂದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.
ಅನುರಾಗ್, ದಾನವೇಂದ್ರ ಹಾಗೂ ಶೈಲೇಂದ್ರ ಯಾದವ್ ಬಂಧಿತ ಆರೋಪಿಗಳು. ಬಂಧಿತರಿಂದ 3500 ರೂ. ಹಾಗೂ 3 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಸೆಕ್ಟರ್ 49 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವಾಟ್ಸಾಪ್ ಸೇರಿದಂತೆ ಆನ್ಲೈನ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದ ಇವರು ಪ್ರತಿ ಗಿರಾಕಿಗೆ 3000 ರೂಪಾಯಿ ಶುಲ್ಕ ಪಡೆಯುತ್ತಿದ್ದರು. ಗ್ರಾಹಕರ ಸೆಳೆದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ನೋಯ್ಡಾ ಸೆಕ್ಟರ್ 49 ಠಾಣೆ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಪೊಲೀಸರು, ಮಾನವ ಕಳ್ಳ ಸಾಗಣೆ ತಡೆ ಘಟಕದ ಕಾರ್ಯಾಚರಣೆ ನಡೆಸಲಾಗಿದೆ.
ಮೂವರನ್ನು ಬಂಧಿಸಿದ್ದು, ನಾಲ್ಕನೇ ಆರೋಪಿ ತಲೆಮರೆಸಿಕೊಂಡಿದ್ದಾನೆ. ದಂಧೆಯಲ್ಲಿ ಮೂವರು ಮಹಿಳೆಯರ ಪಾತ್ರವೂ ಇದ್ದು, ತನಿಖೆ ಮುಂದುವರಿಸಲಾಗಿದೆ. ಮಾನವ ಕಳ್ಳಸಾಗಣೆ ತಡೆ ಘಟಕದಿಂದ ವೇಶ್ಯಾವಾಟಿಕೆ ದಂಧೆ ಭೇದಿಸಲಾಗಿದೆ ಎಂದು ಮಹಿಳಾ ಸುರಕ್ಷತೆ ವೀಭಾಗದ ಡಿಸಿಪಿ ವೃಂದಾ ಶುಕ್ಲಾ ತಿಳಿಸಿದ್ದಾರೆ.