ಕಸದ ತೊಟ್ಟಿಯಲ್ಲಿ ಯಾರೋ ಮೃತದೇಹವನ್ನು ಎಸೆದಿದ್ದಾರೆ ಎಂದು ತನಿಖೆಗಿಳಿದ ಪೊಲೀಸರು ಮುಜುಗರಕ್ಕೊಳಗಾದ ಘಟನೆ ಮಲೇಷ್ಯಾದಲ್ಲಿ ನಡೆದಿದೆ.
ಮಲೇಷ್ಯಾದ ಶಾ ಆಲಂನಲ್ಲಿರುವ ಮೋಟಾರ್ಬೈಕ್ ಅಂಗಡಿಯೊಂದರ ಹಿಂಭಾಗದಲ್ಲಿ ಕಂಬಳಿ ಮತ್ತು ಪ್ಲಾಸ್ಟಿಕ್ನಲ್ಲಿ ದೇಹವನ್ನು ಸುತ್ತಲಾಗಿದೆ ಎಂದು ತ್ಯಾಜ ನಿರ್ವಹಣಾ ಕಾರ್ಮಿಕ ಗಮನಿಸಿದ್ದಾನೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕಾಗಮಿಸಿದ್ದಾರೆ. ಫೋರೆನ್ಸಿಕ್ ತಂಡದೊಂದಿಗೆ ಪೊಲೀಸರು ಆ ಸ್ಥಳಕ್ಕೆ ತಲುಪಿದಾಗ ಜನರು ಕೂಡ ಅಲ್ಲಿ ಜಮಾಯಿಸಿದ್ದಾರೆ.
ವಿಧಿವಿಜ್ಞಾನ ತಂಡವು ಪ್ಲಾಸ್ಟಿಕ್ ಚೀಲವನ್ನು ತೆರೆದಾಗ ನೆರೆದಿದ್ದವರೆಲ್ಲರೂ ಶಾಕ್ ಆಗಿದ್ದಾರೆ. ಯಾಕೆಂದರೆ ಚೀಲದ ಒಳಗೆ ಇದ್ದಿದ್ದು ಮಹಿಳೆಯ ಆಕಾರದಲ್ಲಿರುವ ಮೇಣದಿಂದ ಮಾಡಿದ ಸೆಕ್ಸ್ ಗೊಂಬೆ ಆಗಿತ್ತು. ಕೂಡಲೇ ಅಲ್ಲಿಂದ ಪೊಲೀಸರು ಜಾಗ ಖಾಲಿ ಮಾಡಿದ್ದಾರೆ.
ಮಧ್ಯಾಹ್ನದ ವೇಳೆ ಯಾರೋ ಸೆಕ್ಸ್ ಗೊಂಬೆಯನ್ನು ಎಸೆದಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಈ ವೇಳೆ ಜನರು ಯಾರೂ ಗಮನಿಸಲಿಲ್ಲವೇ ಎಂಬುದು ಅಚ್ಚರಿಗೆ ಕಾರಣವಾಗಿದೆ. ಸದ್ಯ, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಜಾರ್ಜಿಯಾದಲ್ಲಿ ಕೂಡ ಇದೇ ರೀತಿಯ ಘಟನೆ ಸಂಭವಿಸಿದೆ.