ಭಾರತ ಮಡಿವಂತಿಕೆಯ ದೇಶ. ಇಲ್ಲಿ ಮಹಿಳೆಯರ ದೇಹಕ್ಕೆ ಸಂಬಂಧಿಸಿದ ಸಮಸ್ಯೆ ಸೇರಿದಂತೆ ಅನೇಕ ವಿಷ್ಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಈ ಮಧ್ಯೆ ಭಾರತದಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಹೆಚ್ಚಾಗಿದೆ. ಹೆಣ್ಣು ಗಂಡಾಗಲು, ಗಂಡು ಹೆಣ್ಣಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವವರ ಸಂಖ್ಯೆ ಏರಿದೆ.
ಕೇರಳದಲ್ಲಿ ಹೆಚ್ಚು ಪ್ರಕರಣ ವರದಿಯಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ಬರುವ ಇಲಾಖೆಯ ಮಾಹಿತಿಯ ಪ್ರಕಾರ, ಶಸ್ತ್ರಚಿಕಿತ್ಸೆಗೊಳಗಾಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಲೈಂಗಿಕ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗುವವರ ಮಾನಸಿಕ ಮತ್ತು ದೈಹಿಕ ಸದೃಢತೆಯನ್ನು ಪರೀಕ್ಷೆ ಮಾಡಲಾಗ್ತಿದೆ. ಇದ್ರ ಜೊತೆಗೆ ಶಸ್ತ್ರಚಿಕಿತ್ಸೆಗೆ ಆರು ತಿಂಗಳ ಮೊದಲು ಮತ್ತು ನಂತರ ಆರು ತಿಂಗಳು ಕೌನ್ಸಿಲಿಂಗ್ ಮಾಡುವಂತೆ ಸಲಹೆ ನೀಡಲಾಗಿದೆ.
ಪ್ರತಿಯೊಬ್ಬ ಭಾರತೀಯರಿಗೆ ಸಿಗಲಿದೆ ಆರೋಗ್ಯ ವಿಮೆ: ಸರ್ಕಾರ ರೂಪಿಸಿದೆ ಹೊಸ ಯೋಜನೆ
2018-2019ರಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡ 11 ಮಂದಿಗೆ ಸರ್ಕಾರದಿಂದ ನೆರವು ಸಿಕ್ಕಿತ್ತು. 2020-21ರಲ್ಲಿ 41 ಮಂದಿ ಮಹಿಳೆಯರು ಸೇರಿದಂತೆ 83 ಮಂದಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಇದ್ರಲ್ಲಿ ಮಹಿಳೆಯರಿಗಿಂತ ಪುರುಷರು ಹೆಚ್ಚು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಮಹಿಳೆಯಿಂದ ಪುರುಷರಾಗುವ ಶಸ್ತ್ರಚಿಕಿತ್ಸೆ ವೆಚ್ಚ ಹೆಚ್ಚು. ಹಾಗೆ ಕೆಲವೊಂದು ಸಮಸ್ಯೆಗಳನ್ನು ಇದ್ರಲ್ಲಿ ಎದುರಿಸಬೇಕಾಗುತ್ತದೆ. ಟ್ರಾನ್ಸ್ ಜೆಂಡರ್ ಗಳಲ್ಲಿ ಪುರುಷರಿಂದ ಮಹಿಳೆಯಾಗುವವರ ಸಂಖ್ಯೆ ಹೆಚ್ಚು. ಇದ್ರಿಂದಾಗುವ ಆರೋಗ್ಯ ಸಮಸ್ಯೆ ಬಗ್ಗೆ ಅಧ್ಯಯನ ನಡೆಸುವ ಬಗ್ಗೆ ಕೇರಳ ಸರ್ಕಾರ ಚಿಂತನೆ ನಡೆಸುತ್ತಿದೆ. ಲಿಂಗ ಪರಿವರ್ತನೆ ನಂತ್ರ ಮಹಿಳೆಯರಿಗೆ 2.5 ಲಕ್ಷ ಹಾಗೂ ಪುರುಷರಿಗೆ 5 ಲಕ್ಷ ರೂಪಾಯಿಯನ್ನು ಕೇರಳ ಸರ್ಕಾರ ನೀಡ್ತಿದೆ.