ಭಾವ್ ನಗರ: ಕೇಂದ್ರ ಆರೋಗ್ಯ ಇಲಾಖೆಯಿಂದ ಆತಂಕಕಾರಿ ಮಾಹಿತಿ ನೀಡಲಾಗಿದೆ. ಕೊರೋನಾ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಕೊರೋನಾ ಬಂದಿದ್ದವರು ಕಠಿಣ ಕೆಲಸ ಮಾಡದಂತೆ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಸಲಹೆ ನೀಡಿದ್ದಾರೆ.
ಗುಜರಾತ್ ನ ಭಾವನ್ ನಗರದಲ್ಲಿ ಮಾತನಾಡಿದ ಅವರು, ಹೆಚ್ಚು ಶ್ರಮದ ಕೆಲಸಗಳಿಂದ ಹೃದಯಾಘಾತಕ್ಕೆ ಕಾರಣವಾಗಬಹುದು. ಒಂದೆರಡು ವರ್ಷಗಳ ಕಾಲ ಕಠಿಣ ಕೆಲಸಗಳನ್ನು ಮುಂದೂಡುವಂತೆ ತಿಳಿಸಿದ್ದಾರೆ.
ಯುವಕರಲ್ಲಿ ಹೃದಯಾಘಾತ ಹೆಚ್ಚಳವಾದ ಹಿನ್ನೆಲೆಯಲ್ಲಿ ಐಸಿಎಂಆರ್ ಅಧ್ಯಯನ ನಡೆಸಿದ್ದು, ಅಧ್ಯಯನ ವರದಿ ಆಧರಿಸಿ ಮನಸುಖ್ ಮಾಂಡವೀಯ ದೇಶದ ಜನತೆಗೆ ಕರೆ ನೀಡಿದ್ದಾರೆ. ತೀವ್ರ ಸ್ವರೂಪದ ಕೊರೋನಾ ಸೋಂಕಿಗೆ ತುತ್ತಾದವರು ಕಠಿಣ ಕೆಲಸ, ಹೆಚ್ಚು ಶ್ರಮದ ಕೆಲಸಗಳಿಂದ ದೂರ ಇದ್ದು ಹೃದಯಾಘಾತದಿಂದ ಪಾರಾಗಬೇಕು ಎಂದು ತಿಳಿಸಿದ್ದಾರೆ.