ನ್ಯೂಯಾರ್ಕ್‌ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 7 ವರ್ಷದ ಅಪ್ರಾಪ್ತ ಬಾಲಕನ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಗಂಭೀರ ಚರ್ಚೆಯಾಗ್ತಿದೆ. ಇದೊಂದು ಅಸಂಬದ್ಧ, ಸುಳ್ಳು ಆರೋಪವೆಂದು ಜನರು ಆರೋಪ ಮಾಡ್ತಿದ್ದಾರೆ.
ಏಳು ವರ್ಷದ ಬಾಲಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ. ನ್ಯೂಯಾರ್ಕ್ ಪೊಲೀಸರ ಪ್ರಕಾರ, ಆರೋಪಿ ಮಗುವಿನ ವಿರುದ್ಧ ಕುಟುಂಬ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಆದರೆ ಬಾಲಕ ಅತ್ಯಾಚಾರ ಮಾಡಿದ್ದಾನೆ ಎಂಬುದನ್ನು ನಂಬಲು ಅಸಾಧ್ಯವೆಂದು ನ್ಯೂಯಾರ್ಕ್ ನಗರದ ಅಟಾರ್ನಿ ಆಂಥೋನಿ ಹೇಳಿದ್ದಾರೆ. 7 ವರ್ಷದ ಬಾಲಕ ಹೇಗೆ ಅತ್ಯಾಚಾರ ಮಾಡಲು ಸಾಧ್ಯವೆಂದು ಅವರು ಪ್ರಶ್ನಿಸಿದ್ದಾರೆ.
ಮುಗ್ದ ಬಾಲಕನ ಮೇಲೆ ಗಂಭೀರ ಆರೋಪ ಮಾಡಲಾಗಿದೆ. ಇದು ಅವನ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಬಾಲಕನಿಗೆ ಮಾನಸಿಕ ಹಿಂಸೆಯಾಗಲಿದೆ ಎಂದವರು ಹೇಳಿದ್ದಾರೆ. ಅಪ್ರಾಪ್ತ ವಯಸ್ಕನು ಈ ಅಪರಾಧವನ್ನು ಹೇಗೆ ಮಾಡಿದ್ದಾನೆಂಬುದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕಾಗುತ್ತದೆ.
ಆರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ವಿರುದ್ಧ ಪ್ರಕರಣ ದಾಖಲಿಸಬಹುದು. ಆದ್ರೆ ಬಾಲಾಪರಾಧಿಗಳ ಕನಿಷ್ಠ ವಯಸ್ಸನ್ನು ಶೀಘ್ರದಲ್ಲೇ 7 ರಿಂದ 12 ಕ್ಕೆ ಹೆಚ್ಚಿಸಲು ಅಲ್ಲಿನ ಸರ್ಕಾರ ಚಿಂತಿಸುತ್ತಿದೆ.