ಕೊರೊನಾ ಲಸಿಕೆಯ ಮಹತ್ವ ದಿನೇ ದಿನೇ ಜನರ ಅರಿವಿಗೆ ಬರುತ್ತಿದೆ. ಅದರಲ್ಲೂ ಕೊರೊನಾ ಲಸಿಕೆಯ ಎರಡೂ ಡೋಸ್ ಪಡೆದಿದ್ದರೆ, ಕೊರೊನಾ ಸೋಂಕಿನ ಗಂಭೀರ ಪರಿಣಾಮದಿಂದ ಬಚಾವಾಗಿ ಆಸ್ಪತ್ರೆಗೆ ದಾಖಲಾಗುವುದು ತಪ್ಪಲಿದೆ ಎಂದು ಜನರು ಮನಗಂಡಿದ್ದಾರೆ. ಹಾಗಿದ್ದೂ ಕೆಲವು ಯುವಕರು ಮಾತ್ರ, ಮೋಜು-ಮಸ್ತಿಗಳ ಅಮಲಿನಲ್ಲಿ ಕೊರೊನಾ ಅಪಾಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಅಲ್ಲದೆಯೇ, ಲಸಿಕೆ ಹಾಕಿಸಿಕೊಳ್ಳದೆಯೇ ಕಳ್ಳಾಟ ಆಡುತ್ತಿದ್ದಾರೆ.
ಇಂಥದ್ದೇ ಯುವತಿಗೆ ಆಕೆಯ ತಾಯಿಯೇ ಬುದ್ಧಿ ಕಲಿಸಿದ್ದಾಳೆ. ಇಂಗ್ಲೆಂಡ್ ನಿವಾಸಿ ಶೆಲ್ಲಿ ಜೋನ್ಸ್‌ಗೆ ತನ್ನದೇ ಆದ ಪಬ್ ಇದೆ. ಜನಪ್ರಿಯ ಪಬ್ ಗೆ ನಿತ್ಯ ನೂರಾರು ಯುವಕ-ಯುವತಿಯರು ಲಗ್ಗೆ ಇಡುತ್ತಾರೆ. ಆದರೆ ಯಾರೇ ಬರಲಿ ಕೊರೊನಾ ಲಸಿಕೆಯ ಎರಡೂ ಡೋಸ್ ಪಡೆದಿರಬೇಕು ಎಂದು ಶೆಲ್ಲಿ ಕಡ್ಡಾಯ ನಿಯಮ ಜಾರಿಗೊಳಿಸಿದ್ದಾರೆ. ಬಹುತೇಕರು ಇದನ್ನು ಪಾಲಿಸಿಕೊಂಡು, ಪಬ್‌ನಲ್ಲಿ ಮೋಜು-ಮಸ್ತಿ ಮಾಡಿಕೊಂಡು ಹೋಗುತ್ತಿದ್ದರು.
ದಾಖಲೆ ಕೊಡದೆ ಉಚಿತವಾಗಿ ಪಾನ್ ಕಾರ್ಡ್ ಪಡೆಯುವ ಕುರಿತು ಇಲ್ಲಿದೆ ಮಾಹಿತಿ
ಒಂದು ದಿನ ತನ್ನ ಸ್ನೇಹಿತೆಯರೊಂದಿಗೆ ಶೆಲ್ಲಿ ಅವರ ಮಗಳು ಪಬ್‌ಗೆ ನುಗ್ಗಲು ಯತ್ನಿಸಿದಾಗ ಆಗಿದ್ದೇ ಬೇರೆ ! ನೇರವಾಗಿ ಮಗಳನ್ನು ಎಳೆದುಕೊಂಡು ಹೋದ ಶೆಲ್ಲಿ ಪಬ್‌ನ ಹೊರಗೆ ನಿಲ್ಲಿಸಿದರು. ಜತೆಗೆ ಕೊರೊನಾ ಲಸಿಕೆಯ ಎರಡೂ ಡೋಸ್ ಪಡೆದ ನಂತರವೇ ಕಾಲಿಡು ಎಂದು ಎಚ್ಚರಿಸಿದರು ಕೂಡ. ಪಬ್‌ನಲ್ಲಿನ ಹಿರಿಯ ಜೀವಗಳು ರಕ್ಷಣೆಯ ಹೊಣೆ ನನ್ನ ಮೇಲಿದೆ ಎಂದು ಶೆಲ್ಲಿ ಜೋರಾಗಿ ಘೋಷಿಸಿದ್ದು, ಅಲ್ಲಿ ನೆರೆದಿದ್ದವರ ಮನಕಲಕಿತು. ಆಕೆಯ ಕಾಳಜಿಗೆ ನೆರೆದಿದ್ದವರೆಲ್ಲರೂ ಚಪ್ಪಾಳೆ ಮೂಲಕ ಮೆಚ್ಚುಗೆ ಸೂಚಿಸಿದರು. ಮಗಳು ಕೂಡ ತಾಯಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾಳೆ.