alex Certify ರಾಜಕೀಯ ನಾಯಕರ ವಿರುದ್ಧ ಬಳಸುತ್ತಿರುವ ಭಾಷೆ ದುರದೃಷ್ಟಕರ: ಯತ್ನಾಳ್ ಹೇಳಿಕೆಗೆ ಸಚಿನ್ ಪೈಲಟ್ ಖಂಡನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಕೀಯ ನಾಯಕರ ವಿರುದ್ಧ ಬಳಸುತ್ತಿರುವ ಭಾಷೆ ದುರದೃಷ್ಟಕರ: ಯತ್ನಾಳ್ ಹೇಳಿಕೆಗೆ ಸಚಿನ್ ಪೈಲಟ್ ಖಂಡನೆ

ಜೈಪುರ(ರಾಜಸ್ಥಾನ): ರಾಜಕೀಯ ನಾಯಕರ ವಿರುದ್ಧ ಬಳಸುತ್ತಿರುವ ಭಾಷೆ ದುರದೃಷ್ಟಕರ ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳಿದ್ದಾರೆ. ಯತ್ನಾಳ್ ಅವರ ಹೇಳಿಕೆ ರಾಜಕೀಯದಲ್ಲಿ ನಕಾರಾತ್ಮಕ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ `ವಿಷಕನ್ಯೆ’ ಪದ ಬಳಸಿರುವುದನ್ನು ಪೈಲಟ್ ಖಂಡಿಸಿದ್ದಾರೆ. ನಾಯಕರ ವಿರುದ್ಧ ಬಳಸುತ್ತಿರುವ ಭಾಷೆ ದುರದೃಷ್ಟಕರವಾಗಿದೆ. ಇದು ರಾಜಕೀಯದಲ್ಲಿ ನಕಾರಾತ್ಮಕ ಉದಾಹರಣೆಯಾಗಿದೆ. ಸೋನಿಯಾ ಗಾಂಧಿ ಅವರು ಅತ್ಯಂತ ಹಿರಿಯ ನಾಯಕಿ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು, ಅವರಿಗೆ ಇಂತಹ ಭಾಷೆ ಬಳಸಿರುವುದು ಅತ್ಯಂತ ಖಂಡನೀಯ ಎಂದು ಪೈಲಟ್ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...