ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಕೆಐಎಎಡಿಬಿ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ರೈತರ ಭೂಮಿ ಸ್ವಾಧೀನದ ಸಂದರ್ಭದಲ್ಲಿ ಸರ್ಕಾರದ ಬೆಲೆಯ ನಾಲ್ಕು ಪಟ್ಟು ಪರಿಹಾರ ನೀಡಲು ಅವಕಾಶ ಮಾಡಿಕೊಡಲಾಗಿದೆ.
ಕರ್ನಾಟಕ ಕೆಐಎಎಡಿಬಿ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದ್ದು, ಇದರ ಅನ್ವಯ ಭೂಮಿ ಸ್ವಾಧೀನ ಸಂದರ್ಭದಲ್ಲಿ ರೈತರಿಗೆ ಸರ್ಕಾರದ ಬೆಲೆಯ ನಾಲ್ಕು ಪಟ್ಟು ಪರಿಹಾರ ನೀಡಬಹುದಾಗಿದೆ ಎಂದು ಹೇಳಲಾಗಿದೆ.
ಇನ್ನು ವಿಧಾನಸಭೆಯಲ್ಲಿ ಬಂಧೀಖಾನೆ ತಿದ್ದುಪಡಿ ವಿಧೇಯಕ ಕೂಡ ಅಂಗೀಕಾರವಾಗಿದೆ. ಜೈಲಿನೊಳಗೆ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ನಿರ್ಬಂಧ ಹೇರಲಾಗಿದೆ. ಪೆರೋಲ್ ಮೇಲೆ ಹೊರಗೆ ಹೋದವರು ನಿರ್ದಿಷ್ಟ ಸಮಯದೊಳಗೆ ವಾಪಸ್ ಆಗದಿದ್ದರೆ ಶಿಕ್ಷೆ ನೀಡಲಾಗುವುದು. ಅವರಿಗೆ ಜಾಮೀನು ನೀಡಿದವರಿಗೆ ಕೂಡ ಶಿಕ್ಷೆ ನೀಡುವ ವಿಧೇಯಕ ಇದಾಗಿದೆ.