ಮಧುರೈ ವಿಭಾಗದ ಮಲವಿಟ್ಟನ್ ರೈಲ್ವೆ ನಿಲ್ದಾಣದಿಂದ ಮೈಸೂರು ವಿಭಾಗದ ಹಾವೇರಿ ನಿಲ್ದಾಣಕ್ಕೆ 2,408 ಟನ್ ರಸಗೊಬ್ಬರವನ್ನು ಹೊತ್ತೊಯ್ಯುತ್ತಿದ್ದ ಗೂಡ್ಸ್ ರೈಲಿನ ಬೋಗಿಗಳು ಹಳಿ ತಪ್ಪಿ ರೈಲು ಸಂಚಾರ ಸ್ಥಗಿತವಾಗಿತ್ತು. ಬೆಂಗಳೂರಿನಿಂದ ಸುಮಾರು 99 ಕಿಮೀ ದೂರದಲ್ಲಿ ರೈಲು ಹಳಿತಪ್ಪಿತ್ತು. ಇದೀಗ ರೈಲಿನ ಮಾರ್ಗದಲ್ಲಿ ಸಂಚಾರ ಶುರುವಾಗಿದೆ.
ಶುಕ್ರವಾರ ರಾತ್ರಿ 7.25ಕ್ಕೆ ರೈಲು ಸಂಚಾರವನ್ನು ಮರುಸ್ಥಾಪಿಸಲಾಯಿತು ಮತ್ತು ರೈಲುಗಳ ಸಂಚಾರಕ್ಕೆ ಮಾರ್ಗ ಯೋಗ್ಯವಾಗಿದೆ ಎಂದು ಪ್ರಮಾಣೀಕರಿಸಲಾಯಿತು.
ಘಟನೆ ವೇಳೆ ರೈಲಿನಲ್ಲಿದ್ದ ಮೂವರು ರೈಲು ಸಿಬ್ಬಂದಿಗಳಾದ ಲೋಕೋ ಪೈಲಟ್ (LP), ಸಹಾಯಕ ಲೋಕೋ ಪೈಲಟ್ ಮತ್ತು ಟ್ರೈನ್ ಮ್ಯಾನೇಜರ್ ಸುರಕ್ಷಿತವಾಗಿದ್ದಾರೆ. ನೈಋತ್ಯ ರೈಲ್ವೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಶುಕ್ರವಾರ ಬೆಳಗಿನ ಜಾವ 2.12 ಗಂಟೆಗೆ ಬೆಂಗಳೂರು-ಸೇಲಂ ವಿಭಾಗದ ಮಾರಂಡಹಳ್ಳಿ ಮತ್ತು ರಾಯಕ್ಕೊಟ್ಟೈ ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿತು. ರೈಲು ಹಳಿ ತಪ್ಪಲು ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈಲು ಬೋಗಿಗಳನ್ನು ಹೊಂದಿತ್ತು. ರೈಲು ಹಳಿತಪ್ಪಿದ ನಂತರ, ಎಂಟು ರೈಲುಗಳನ್ನು ರದ್ದುಗೊಳಿಸಲಾಗಿತ್ತು.