alex Certify ಸಾರ್ವಜನಿಕರಿಗೆ ಗುಡ್ ನ್ಯೂಸ್: ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಕಾಗದ ರಹಿತ ಸೇವೆ; ಮೊಬೈಲ್ ಗೇ ಬರುತ್ತೆ ಅರ್ಜಿ ಸ್ವೀಕೃತಿ, ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರಿಗೆ ಗುಡ್ ನ್ಯೂಸ್: ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಕಾಗದ ರಹಿತ ಸೇವೆ; ಮೊಬೈಲ್ ಗೇ ಬರುತ್ತೆ ಅರ್ಜಿ ಸ್ವೀಕೃತಿ, ಮಾಹಿತಿ

ದಾವಣಗೆರೆ: ಜಿಲ್ಲೆಯ ಅಟಲ್‍ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ವಿವಿಧ ಸೇವೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸ್ನೇಹಿಯಾಗಿ ಕಾಗದ ರಹಿತ ಸೇವೆಯನ್ನು ನೀಡುವ ಸಲುವಾಗಿ ಈ ಕೆಳಗಿನ ಅಂಶಗಳಲ್ಲಿ ಸೇವೆ ಒದಗಿಸಲು ಕ್ರಮವಹಿಸಲಾಗಿದೆ.

ಅರ್ಜಿ ಸ್ವೀಕರಿಸಿದ ನಂತರ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಸ್ವೀಕೃತಿ ಎಸ್‍ಎಂಎಸ್ ನ್ನು ಹಾಗೂ ಅರ್ಜಿದಾರರ ಇ- ಮೇಲ್‍ಗೆ ಸ್ವೀಕೃತಿ ಪತ್ರದ ಪಿಡಿಎಫ್ ಪ್ರತಿಯನ್ನು ಕಳುಹಿಸಲಾಗುತ್ತಿದೆ. ಅರ್ಜಿಯ ಪ್ರತಿ ಹಂತದಲ್ಲಿನ ಪ್ರಕ್ರಿಯೆಯನ್ನು ಹಾಗೂ ಯಾವ ಹಂತದಲ್ಲಿ ಬಾಕಿ ಇದೆ ಎಂಬ ಮಾಹಿತಿಯನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಕಳುಹಿಸಲಾಗುವುದು.

ಅರ್ಜಿ ವಿಲೇವಾರಿಯಾದ ನಂತರ, ಸಿದ್ದಗೊಂಡ ಪ್ರಮಾಣ ಪತ್ರವನ್ನು ಅರ್ಜಿದಾರರಿಗೆ ಈ ಪ್ರಮಾಣ ಪತ್ರದ ಪಿಡಿಎಫ್ ಪ್ರತಿಯನ್ನು ಡೌನೋಡ್ ಮಾಡಿಕೊಳ್ಳಲು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಲಿಂಕ್‍ನ್ನು ಕಳುಹಿಸಲಾಗುತ್ತದೆ. ಹಾಗೂ ಪ್ರಮಾಣ ಪತ್ರದ ಪಿಡಿಎಫ್ ಪ್ರತಿಯನ್ನು ಅರ್ಜಿದಾರರ ಇ-ಮೇಲ್‍ಗೆ ಕಳುಹಿಸಲಾಗುತ್ತಿದೆ. ಅರ್ಜಿದಾರರು ತಮ್ಮ ಹಂತದಲ್ಲಿಯೇ ಪ್ರಮಾಣ ಪತ್ರವನ್ನು ಮುದ್ರಣ ಮಾಡಿಕೊಳ್ಳಬಹುದು. ಈ ಅವಕಾಶದ ಸದುಪಯೋಗಪಡಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...