ನಗು ಎಲ್ಲರನ್ನೂ ಆಕರ್ಷಿಸುತ್ತದೆ. ನಕ್ಕಾಗ ಬಿಳಿ ಹೊಳಪಿನ ಹಲ್ಲು ಮತ್ತಷ್ಟು ಸೌಂದರ್ಯ ಹೆಚ್ಚಿಸುತ್ತದೆ. ಹಳದಿ ಹಲ್ಲಿನ ಸಮಸ್ಯೆಯಿರುವವರು ಹಲ್ಲಿನ ಸ್ವಚ್ಛತೆಗೆ ಮುಂದಾಗ್ತಾರೆ. ಇನ್ಮುಂದೆ ಹೊಳಪಿನ ಹಲ್ಲು ಪಡೆಯಲು ಹೆಚ್ಚಿನ ಹಣ ಪಾವತಿ ಮಾಡಬೇಕಾಗುತ್ತದೆ. ಹಲ್ಲಿಗೆ ಹೊಳಪು ನೀಡುವ ಚಿಕಿತ್ಸೆಗೆ ಶೇಕಡಾ 18ರಷ್ಟು ಜಿಎಸ್ಟಿ ಪಾವತಿಸಲಾಗುವುದು.
ಈ ಬಗ್ಗೆ ಜಿಎಸ್ಟಿ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ಸ್ ನ ಮಹಾರಾಷ್ಟ್ರ ಬೆಂಚ್ ಇತ್ತೀಚಿಗೆ ಈ ಬಗ್ಗೆ ತೀರ್ಪು ನೀಡಿದೆ. ದಂತ ಆರೋಗ್ಯ ಸೇವೆಯಲ್ಲಿ ಕೆಲವೊಂದನ್ನು ಕಾಸ್ಮೆಟಿಕ್ ಸೇವೆಯೆಂದು ಪರಿಗಣಿಸಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಜ್ಯೋತಿ ಸೆರಾಮಿಕ್ಸ್ ಅರ್ಜಿ ಸಲ್ಲಿಸಿತ್ತು. ಕೃತಕ ಹಲ್ಲುಗಳನ್ನು ತಯಾರಿಸಲು ಬಳಸುವ ಸೆರಾಮಿಕ್ ವಸ್ತುಗಳನ್ನು ತಯಾರಿಸಿ ಸರಬರಾಜು ಮಾಡುವುದರ ಜೊತೆಗೆ ಜ್ಯೋತಿ ಸೆರಾಮಿಕ್ಸ್, ದಂತ ಆಸ್ಪತ್ರೆಯನ್ನು ಸಹ ನಡೆಸುತ್ತದೆ.
ಅದ್ರ ಅರ್ಜಿ ವಿಚಾರಣೆ ನಡೆಸಿದ ಮಹಾರಾಷ್ಟ್ರ ಬೆಂಚ್, ಆರೋಗ್ಯ ಸೇವೆಗಳಿಗೆ ಮಾತ್ರ ತೆರಿಗೆ ವಿನಾಯಿತಿ ನೀಡಲಾಗುವುದು. ಹಲ್ಲಿನ ಹೊಳಪು ಸೌಂದರ್ಯವರ್ಧಕ ಚಿಕಿತ್ಸೆಗೆ ಸೇರುತ್ತದೆ. ಅದಕ್ಕೆ ತೆರಿಗೆ ವಿನಾಯಿತಿಯಿಲ್ಲ ಎಂದಿದೆ.