
ನಾಯಿಗಳು ಕೇವಲ ಮನುಷ್ಯನ ಆತ್ಮೀಯ ಸ್ನೇಹಿತ ಎಂದರೆ ಸಾಲದು. ನಾಯಿಗಳು ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆಯೇ ಎಂದು ಹೇಳಬಹುದು. ಅದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿಯೊಂದು ಮಹಿಳೆಯನ್ನು ಹೇಗೆ ರಕ್ಷಿಸಿದೆ ಎನ್ನುವುದನ್ನು ನೋಡಬಹುದು.
ದ ಫಿಗೆನ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋವು 4 ಮಿಲಿಯನ್ ವೀಕ್ಷಣೆ ಗಳಿಸಿದ್ದು, ಥರಹೇವಾರಿ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರಿಗೆ ಮೂರ್ಛೆ ಬಂದಿರುವುದನ್ನು ನೋಡಬಹುದು. ಈಕೆ ಕುಸಿದು ನೆಲದ ಮೇಲೆ ತಲೆಯನ್ನು ಹೊಡೆಯಲು ಪ್ರಾರಂಭಿಸುತ್ತಾಳೆ.
ಮುಂದಿನ ಅಪಾಯವನ್ನು ಗ್ರಹಿಸಿದ ನಾಯಿಯು ಮೊದಲು ಮಹಿಳೆಯನ್ನು ತಡೆಯಲು ಪ್ರಯತ್ನಿಸುತ್ತದೆ. ಏನೂ ಸಾಧ್ಯವಾಗದಾಗ ಕೊನೆಗೆ ತನ್ನ ದೇಹವನ್ನೇ ಮಹಿಳೆಯ ತಲೆ ಕೆಳಗೆ ಇಡುತ್ತದೆ. ಮಹಿಳೆಯ ತಲೆಗೆ ಏನೂ ಆಗಬಾರದು ಎನ್ನುವ ಕಾರಣಕ್ಕೆ ನಾಯಿ ಕೆಳಗೆ ಹೋಗಿ ಮಲಗುವುದನ್ನು ನೋಡಿದಾಗ ಎಂಥವರೂ ಭಾವುಕರಾಗುತ್ತಾರೆ.