ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆಯಾದ ಸೀರಮ್ ಇನ್ಸ್ಟಿಟ್ಯೂಟ್ ತನ್ನ ಕೊರೊನಾ ಲಸಿಕೆಯ ತುರ್ತು ಅನುಮೋದನೆಗಾಗಿ ತುದಿಗಾಲಿನಲ್ಲಿ ನಿಂತಿದೆ.
ಒಂದು ವೇಳೆ ಕೇಂದ್ರ ಸರ್ಕಾರ ಸೆರಮ್ ಲಸಿಕೆಗೆ ತುರ್ತು ಅನುಮೋದನೆ ನೀಡಿದ್ರೆ ಸೀರಮ್ ಪ್ರತಿ ಡೋಸ್ಗೆ 250 ರೂಪಾಯಿ ನಿಗದಿ ಮಾಡಲು ಸಂಸ್ಥೆ ನಿರ್ಧರಿಸಿದೆ ಎನ್ನಲಾಗಿದೆ.
ಬ್ರಿಟನ್ನಲ್ಲಿ ಫೈಜರ್ ಲಸಿಕೆಗೆ ಅನುಮೋದನೆ ದೊರೆತ ಬಳಿಕ ಸೀರಮ್ ಕೂಡ ತನ್ನ ಕೊರೊನಾ ಲಸಿಕೆಗೆ ತುರ್ತು ಅನುಮೋದನೆ ನೀಡುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿದೆ. ಪ್ರಸ್ತುತ ಭಾರತದಲ್ಲಿ ಸೇರಮ್ ಲಸಿಕೆಯ ಮೂರನೆ ಹಂತದ ಪ್ರಯೋಗ ನಡೆಯುತ್ತಿದೆ.