alex Certify ʼವಿಶ್ವ ದಾಖಲೆʼ ಸರದಾರನಿಂದ ಮತ್ತೊಂದು ಸಾಧನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಶ್ವ ದಾಖಲೆʼ ಸರದಾರನಿಂದ ಮತ್ತೊಂದು ಸಾಧನೆ…!

ಡೇವಿಡ್​ ರಶ್​ ತಮ್ಮ ಪ್ರತಿಭೆಯ ಮೂಲಕವೇ ಪದೇ ಪದೇ ಸುದ್ದಿ ಮಾಡ್ತಾನೇ ಇರ್ತಾರೆ. ಇವರು ಸರಣಿ ರೆಕಾರ್ಡ್ ಬ್ರೇಕರ್​​​ ಆಗಿದ್ದು ಗಿನ್ನೆಸ್​ ವಿಶ್ವ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನ ಮತ್ತೊಮ್ಮೆ ನೋಂದಾಯಿಸಿದ್ದಾರೆ.

ಅಮೆರಿಕದ ಇಡಾಹೋದ ನಿವಾಸಿಯಾಗಿರುವ ಡೇವಿಡ್​ ತಮ್ಮ ಪ್ರತಿಭೆಯ ಮೂಲಕ ಚಿತ್ರ ವಿಚಿತ್ರ ವಿಶ್ವ ದಾಖಲೆಯನ್ನ ಮಾಡ್ತಿದ್ದಾರೆ.

30 ವರ್ಷದಲ್ಲಿ ಒಂದೇ ಒಂದು ವಿಶ್ವ ದಾಖಲೆಯ ಸಾಧನೆಯನ್ನೂ ಮಾಡಿರದ ಡೇವಿಡ್​ 35 ವರ್ಷದ ಹೊತ್ತಿಗೆ 150ಕ್ಕೂ ಹೆಚ್ಚು ದಾಖಲೆಗಳನ್ನ ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ.

ಇದೀಗ ತಮ್ಮ ವಿಶ್ವ ದಾಖಲೆಯ ಸರಣಿಗೆ ಮತ್ತೊಂದು ಸಾಧನೆಯನ್ನ ಸೇರಿಸಿದ್ದಾರೆ. ಸ್ವಿಸ್​ ಚೆಂಡಿನ ಮೇಲೆ ನಿಂತುಕೊಂಡು 1 ನಿಮಿಷಗಳ ಅವಧಿಯಲ್ಲಿ 522 ಬಾರಿ ಕೈಲಿದ್ದ ಬಾಲುಗಳನ್ನ ಕ್ಯಾಚ್​​ ಮಾಡಿದ್ದಾರೆ. ಈ ವಿಶ್ವದಾಖಲೆಯ ಸಾಧನೆಯನ್ನ ಡೇವಿಡ್​ ತಮ್ಮ ಯುಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...