alex Certify 200 ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಕಳ್ಳ ಕೊನೆಗೂ ಅಂದರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

200 ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಕಳ್ಳ ಕೊನೆಗೂ ಅಂದರ್..!

ಹೈದರಾಬಾದ್: ಕಳ್ಳನೊಬ್ಬ ನಗರದೊಳಗೆ ನುಗ್ಗಿ ನಾಜೂಕಾಗಿ ಚಿನ್ನ ಎಗರಿಸಿ ಅಷ್ಟೇ ಸಲೀಸಲಾಗಿ ಪರಾರಿಯಾಗುತ್ತಿದ್ದ. ಈತನಿಗಾಗಿ ಪೊಲೀಸರು ಬಲೆ ಬೀಸಿದ್ದರೂ ಅವರ ಕೈಗೆ ಸಿಕ್ಕಿರಲಿಲ್ಲ. ಹೀಗಾಗಿ ಇಲ್ಲಿಯ ಕಮೀಷನರೇಟ್ ವ್ಯಾಪ್ತಿಯಲ್ಲಿ ತಂಡ ರಚನೆ ಮಾಡಿ ಈ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ಈ ಆಸಾಮಿ ಸಿಕ್ಕಿ ಬಿದ್ದಿದ್ದಾನೆ.

ಹೈದರಾಬಾದ್ ನ ಪೊಲೀಸರಿಗೆ ಕಳ್ಳನೊಬ್ಬ ತಲೆನೋವಾಗಿ ಪರಿಣಮಿಸಿದ್ದ. ಈ ವ್ಯಕ್ತಿ ನಗರಕ್ಕೆ ಹೇಗೆ ಬರುತ್ತಾನೆ ? ಆನಂತರ ಕಳ್ಳತನ ಮಾಡಿ ಹೇಗೆ ಪರಾರಿಯಾಗುತ್ತಾನೆ ? ಎಂಬುವುದೇ ತಿಳಿಯುತ್ತಿರಲಿಲ್ಲ. ಈತನ ಪತ್ತೆ ಹಚ್ಚಲು ಪೊಲೀಸರು ಸಾಕಷ್ಟು ಪ್ರಯತ್ನಿಸಿದ್ದರು. ಸುಮಾರು 200ಕ್ಕೂ ಅಧಿಕ ಪೊಲೀಸರು ಈತನನ್ನು ಹಿಡಿಯಲೇಬೇಕು ಎಂದು ಪಟ್ಟು ಹಿಡಿದವರಂತೆ ಹಗಲು – ರಾತ್ರಿ ಪ್ರಯತ್ನಿಸುತ್ತಿದ್ದರು. ಆದರೂ ಈತ ಮಾತ್ರ ತಲೆ ಮರೆಸಿಕೊಳ್ಳುತ್ತಿದ್ದ.

ಕೊನೆಗೂ ಈ ಖತರ್ನಾಕ್ ಕಳ್ಳ ಸಿಕ್ಕಿ ಬಿದ್ದಿದ್ದು, ಗುಜರಾತ್ ನ ಅಹಮದಾಬಾದ್ ನಲ್ಲಿ ಪೊಲೀಸರಿಗೆ ಸೆರೆಯಾಗಿದ್ದಾನೆ. ಈತ ಪ್ರತಿ ದಿನ ಸುಮಾರು 5 ಚಿನ್ನದ ಸರಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಚಿಕ್ಕವಯಸ್ಸಿನಿಂದಲೇ ಈತ ಈ ಖಯಾಲಿ ಶುರುವಿಟ್ಟಿದ್ದ ಎನ್ನಲಾಗಿದೆ.

ಇತ್ತೀಚೆಗೆ ಮಡದಿಗಾಗಿ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಈ ಕಳ್ಳನನ್ನು ಉಮೇಶ್ ಖತಿಕ್ ಎಂದು ಗುರುತಿಸಲಾಗಿದೆ. ಹಲವು ಬಾರಿ ಈ ವ್ಯಕ್ತಿ ಕಳ್ಳತನದಿಂದಾಗಿ ಸಿಕ್ಕಿ ಹಾಕಿಕೊಂಡಿದ್ದ. ಆದರೆ, ಜಾಮೀನಿನ ಮೇಲೆ ಪ್ರತಿ ಬಾರಿ ಹೊರಗೆ ಬರುತ್ತಿದ್ದ. ಆದರೂ ತನ್ನ ಕೃತ್ಯ ಕೈ ಬಿಡದೆ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹೈದರಾಬಾದ್ ಪೊಲೀಸರ ನಿದ್ದೆಗೆಡಿಸಿದ್ದ ಈ ವ್ಯಕ್ತಿ, ಅಲ್ಲಿ ತನ್ನ ಕೈ ಚಳಕ ತೋರಿಸಿ ಅಹಮದಾಬಾದ್ ನತ್ತ ಹೋಗಿದ್ದ. ಅಲ್ಲಿ ಸಿಕ್ಕಿಹಾಕಿಕೊಂಡಿದ್ದು, ಸದ್ಯ ಹೈದರಾಬಾದ್ ಪೊಲೀಸರು ತಮಗೆ ಒಪ್ಪಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಆತನನ್ನು ಒಪ್ಪಿಸಲು ಸಾಧ್ಯವಾಗುತ್ತಿಲ್ಲ. ಹಲವು ರಾಜ್ಯಗಳ ಪೊಲೀಸರಿಗೂ ಈ ವ್ಯಕ್ತಿ ಬೇಕು ಎನ್ನಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...