ಬೆಂಗಳೂರು: ಬೆಂಗಳೂರಿನಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಕೆ ಎಸ್ ಆರ್ ಟಿಸಿ ಬಸ್, ಆಟೋ, ಕಾರು ಹಾಗೂ ಖಾಸಗಿ ಬಸ್ ಗಳ ನಡುವೆ ಅಪಘಾತ ಸಂಭವಿಸಿದ್ದು, ಬಸ್ ಚಾಲಕ ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಡಿವೈಡರ್ ಗೆ ಕೆ ಎಸಾರ್ ಟಿದ್ಸಿ ಬಸ್ ಡಿಕ್ಕಿ ಹೊಡೆದು ಹೊರಬಂದಿದ್ದು, ಬಲ ಭಾಗದಲ್ಲಿ ಓವರ್ ಟೇಕ್ ಮಾಡಲು ಬಂದಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಕಾರು, ಖಾಸಗಿ ಬಸ್ ಗಳ ನಡುವೆಯೂ ಅಪಘಾತ ಸಂಭವಿಸಿದೆ.
ಬಸ್ ಹಾಗೂ ಆಟೋ ಚಾಲಕರಿಬ್ಬರಿಗೂ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.