ಭಾರತದ ನೂತನ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಭಾನುವಾರದಂದು ಪ್ರಮಾಣವಚನ ಸ್ವೀಕರಿಸಿದ್ದು, ಇದರ ಬೆನ್ನಲ್ಲೇ ಇಂದು ಬೆಳಿಗ್ಗೆ ಷೇರು ಮಾರುಕಟ್ಟೆ ತೆರೆಯುತ್ತಲೇ ಸೆನ್ಸೆಕ್ಸ್ ಹಾಗೂ ನಿಫ್ಟಿ ಯಲ್ಲಿ ಭಾರಿ ಏರಿಕೆಯಾಗಿದೆ.
ನರೇಂದ್ರ ಮೋದಿಯವರು ಸತತ ಮೂರನೇ ಅವಧಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಜೂನ್ ಅತ್ತರಾ ಎಂದು ಬೆಳಿಗ್ಗೆ 9:21ರ ಸುಮಾರಿಗೆ ನಿಫ್ಟಿ 91.90 ಪಾಯಿಂಟ್ ಅಥವಾ ಶೇಕಡ 0.39 ಏರಿಕೆಯೊಂದಿಗೆ 23,382.05 ಅಂಕ ತಲುಪಿತ್ತು.
ಹಾಗೆಯೇ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಸೆನ್ಸೆಕ್ಸ್ 233.11 ಪಾಯಿಂಟ್ ಅಥವಾ ಶೇ.0.30 ಏರಿಕೆಯೊಂದಿಗೆ 76,926.47 ಅಂಕ ತಲುಪಿತ್ತು. ಎನ್ ಎಸ್ ಇ 23,411.90 ಹಾಗೂ ಸೆನ್ಸೆಕ್ಸ್ 77,079.04 ಅಂಕಗಳೊಂದಿಗೆ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ.