ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಹಿರಿಯ ನಾಗರಿಕರಿಗೆ ವಿಶಿಷ್ಟ ಪ್ರವಾಸ ಯೋಜನೆಗಳನ್ನು ರೂಪಿಸಿದೆ.
ಪ್ರವಾಸ ಮಾಡಿ ಕಂತುಗಳಲ್ಲಿ ಹಣ ಪಾವತಿಸುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಹಿರಿಯ ನಾಗರೀಕರಿಗೆ ಪ್ರವಾಸಕ್ಕೆ ಕರೆದೊಯ್ದು ಸುರಕ್ಷಿತವಾಗಿ ಮನೆಗೆ ತಲುಪಿಸಲಾಗುವುದು. ಮೊದಲು ಪ್ರವಾಸ ಮಾಡಿ ನಂತರ ಕಂತುಗಳಲ್ಲಿ ಹಣ ಪಾವತಿಸಬಹುದು. ಹಿರಿಯ ನಾಗರಿಕರಿಗೆ ಅವರಿಗೆ ಇಷ್ಟವಾದ ಊಟ, ಇಚ್ಛೆಯ ತಾಣ, ಅನುಕೂಲಕರವಾದ ದಿನಾಂಕ, ವಿಮಾನ, ರೈಲು ಸೇರಿ ಬಯಸಿದ ಸಾರಿಗೆಯಲ್ಲಿ ಪ್ರಯಾಣ ವ್ಯವಸ್ಥೆ ಮಾಡಲಾಗುವುದು.
ಎಂಎಸ್ಐಎಲ್ ಟೂರ್ಸ್ ಅಂಡ್ ಟ್ರಾವೆಲ್ಸ್ ವಿಭಾಗವು ಈ ವಿಶಿಷ್ಟ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಇಎಂಐ ವಿತ್ ಟ್ರಾವೆಲ್, ಕಿಚನ್ ವಿತ್ ಟ್ರಾವೆಲ್, ಡೋರ್ ಟು ಡೋರ್ ಟ್ರಾವೆಲ್ ವಿಶಿಷ್ಟ ಪ್ರವಾಸ ಪ್ಯಾಕೇಜ್ ಗಳನ್ನು ಪರಿಚಯಿಸಲಾಗುತ್ತಿದೆ.
ಮೊದಲ ಹಂತದಲ್ಲಿ ಸೆಪ್ಟಂಬರ್ ನಲ್ಲಿ ಆದಿ ಕೈಲಾಸ ಮತ್ತು ವಾರಣಾಸಿಗೆ ಪ್ರವಾಸ ಆಯೋಜಿಸುತ್ತಿದ್ದು, ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎಂಎಸ್ಐಎಲ್ ಪ್ರವಾಸದಲ್ಲಿ ಅದೇ ಸಂಸ್ಥೆಯ ಸ್ವಯಂಸೇವಕರು ಜೊತೆಯಲ್ಲಿ ಇದ್ದು ನೆರವಾಗಲಿದ್ದಾರೆ.
080 45888882 ಹೆಲ್ಪ್ ಲೈನ್, 99353645921 ವಾಟ್ಸಾಪ್ ನಂಬರ್ ಮೂಲಕ ಪ್ರವಾಸಿಗರಿಗೆ ಮಾಹಿತಿ ಸಿಗಲಿದೆ.