ವಯೋ ವೃದ್ಧರು ತಮ್ಮೊಳಗಿನ ಮಗುವಿನ ಸ್ಥಿತಿಯನ್ನು ಜಾಗೃತಗೊಳಿಸಿ ಪಾರ್ಕ್ನಲ್ಲಿ ಬಿಡುಬೀಸಾಗಿ ಆಟವಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೋಕಾಲಿ ಮೇಲೆ ಕುಳಿತ ಇಬ್ಬರು ಅಜ್ಜಿಯರು ಹಾಗು ಒಬ್ಬ ಹಿರಿಯ ವ್ಯಕ್ತಿ ಸ್ಪ್ರಿಂಗ್ ಡಕ್ ಮೇಲೆ ಕುಳಿತು ಸವಾರಿ ಮಾಡುತ್ತಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ. ಮಕ್ಕಳಂತೆ ಜೋಕಾಲಿಯಲ್ಲಿ ಮೈಮರೆತು ತೂಗಿಕೊಳ್ಳುವುದು ನೋಡಿಗರಿಗೆ ಖುಷಿ ತರದೇ ಇರದು.
ಹಸಿರು ಹುಲ್ಲುಗಾವಲಿನ ನಡುವೆ, ಮೂವರು ಹಿರಿಯರು ವಯಸ್ಸು ಕೇವಲ ಸಂಖ್ಯೆಯೇ ಹೊರತು ದೇಹಕ್ಕಲ್ಲ ಎಂದು ಸಾಬೀತುಪಡಿಸುವಂತಿದೆ.
ವಿಡಿಯೋ ಜೊತೆಗೆ ಇದೇ ವಿಷಯವನ್ನು ಹೇಳುವ ಶೀರ್ಷಿಕೆ ಕೂಡ ಇದೆ. ವಯಸ್ಸು ಕೇವಲ ಒಂದು ಸಂಖ್ಯೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ” ಎಂದು ಶೀರ್ಷಿಕೆ ಇದೆ.
ಇದನ್ನು ನೋಡಿದ ನೆಟ್ಟಿಗರ ಮನಸ್ಸು ಬೆಚ್ಚಗಾಗಿದೆ. ಕಾಮೆಂಟ್ ವಿಭಾಗವನ್ನು ಹಾರ್ಟ್ ಎಮೋಜಿಗಳು ಮತ್ತು ಮೆಚ್ಚುಗೆಯೊಂದಿಗೆ ತುಂಬಿಹೋಗಿದೆ.
ಹಿರಿಯ ವ್ಯಕ್ತಿಯೊಬ್ಬರು ತಮ್ಮ ಉತ್ಸಾಹ ಮತ್ತು ಚೈತನ್ಯವನ್ನು ಎಂದಿಗೂ ಬಿಡದಂತೆ ಯುವಕರನ್ನು ಪ್ರೇರೇಪಿಸುವ ವಿಡಿಯೋ ಬಂದಿರುವುದು ಇದೇ ಮೊದಲಲ್ಲ.
ಇತ್ತೀಚೆಗಷ್ಟೇ ಮುಂಬೈ ಮೂಲದ ಟೇಬಲ್ ಟೆನಿಸ್ ಆಟಗಾರರೊಬ್ಬರು ಯುವ ಆಟಗಾರರ ಗಮನ ಸೆಳೆಯುವಂತೆ ಕಾಣಿಸಿಕೊಂಡಿದ್ದರು. 60ರ ದಶಕದಲ್ಲಿ ಟೇಬಲ್ ಟೆನಿಸ್ ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದ ಆ ವ್ಯಕ್ತಿಯಲ್ಲಿ ಈಗಲೂ ಕೌಶಲ್ಯಗಳು ಕಡಿಮೆಯಾಗಿಲ್ಲದಂತೆ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.