ನವದೆಹಲಿ: ಹಿರಿಯ ನಾಗರಿಕರ ಮನೆ ಸಮೀಪದಲ್ಲೇ ಕೋವಿಡ್ ಲಸಿಕೆ ಕೇಂದ್ರಗಳನ್ನು ಸ್ಥಾಪಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
60 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಅನುಕೂಲವಾಗುವಂತೆ ಅವರ ಮನೆ ಸಮೀಪವೇ ಲಸಿಕೆ ನೀಡುವ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ತಿಳಿಸಲಾಗಿದೆ.
ಮನೆ ಸಮೀಪ ಲಸಿಕೆ ಕೇಂದ್ರ ಆರಂಭಿಸಬೇಕು. ಇದು ಜನಕೇಂದ್ರಿತ ಮತ್ತು ಹೊಂದಾಣಿಕೆಯಿಂದ ಕೂಡಿದ ಲಸಿಕೆಯ ಆಂದೋಲನವಾಗಬೇಕು ಎಂದು ಕೇಂದ್ರ ಆರೋಗ್ಯ ಮಂತ್ರಾಲಯದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಲಸಿಕೆ ಪಡೆಯಲು ಬಯಸುವವರು ಕೋ -ವಿನ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬಹುದು. ಇಲ್ಲವೇ ಲಸಿಕೆ ಕೇಂದ್ರಕ್ಕೆ ತೆರಳಿ ಸ್ಥಳದಲ್ಲಿ ನೋಂದಣಿ ಮಾಡಿಸಿಕೊಂದು ಲಸಿಕೆ ಪಡೆಯಬಹುದು. ಲಸಿಕೆ ಹಾಕಿಸಿಕೊಳ್ಳದವರು, ಮೊದಲನೇ ಡೋಸ್ ಪಡೆದುಕೊಂಡ 60 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರ ಅನುಕೂಲಕ್ಕಾಗಿ ಮನೆ ಬಳಿ ಲಸಿಕೆ ಕೇಂದ್ರಗಳನ್ನು ಸ್ಥಾಪಿಸುವಂತೆ ತಿಳಿಸಲಾಗಿದೆ.