ನವದೆಹಲಿ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಮ್ಮ ಹಿರಿಯಣ್ಣ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿಕೆ ನೀಡಿರುವುದಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಲೋಕಸಭೆ ಸದಸ್ಯ ಗೌತಮ್ ಗಂಭೀರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲು ನಿಮ್ಮ ಮಕ್ಕಳನ್ನು ಪಾಕಿಸ್ತಾನದ ಗಡಿಗೆ ಕಳುಹಿಸಿ ಬಳಿಕ ಉಗ್ರರ ದೇಶದ ಪ್ರಧಾನಿಯನ್ನು ನಿಮ್ಮ ಸಹೋದರನೆಂದು ಕರೆಯಿರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನವಜೋತ್ ಸಿಂಗ್ ಸಿಧು ಅವರ ಮಕ್ಕಳು ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದಾರೆಯೇ? ಒಂದು ವೇಳೆ ಅವರ ಮಕ್ಕಳು ಸೇವೆ ಸಲ್ಲಿಸಿದ್ದರೆ ಉಗ್ರರ ದೇಶದ ಪ್ರಧಾನಿಯನ್ನು ಸಹೋದರನೆಂದು ಕರ್ತಾರ್ಪುರ್ ಸಾಹಿಬ್ ನಲ್ಲಿ ಸಿಧು ಕರೆಯುತ್ತಿದ್ದರೆ? ಇದೊಂದು ನಾಚಿಕೆಗೇಡಿನ ಹೇಳಿಕೆ. ಕಳೆದ ತಿಂಗಳಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಗ್ದ ನಾಗರಿಕರು ಮತ್ತು ಸೈನಿಕರನ್ನು ಕೊಂದು ಹಾಕಲಾಗಿದೆ. ಇದರ ಬಗ್ಗೆ ಧ್ವನಿ ಎತ್ತದ ನವಜೋತ್ ಸಿಂಗ್ ಸಿಧು ದೇಶವನ್ನು ರಕ್ಷಿಸವವರ ವಿರುದ್ಧವೇ ಹೋಗುತ್ತಿದ್ದಾರೆ ಎಂದು ಗೌತಮ್ ಗಂಭೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.