ನವದೆಹಲಿ: ತಪ್ಪಾಗಿ ನಿಲುಗಡೆ ಮಾಡಿರುವ ವಾಹನದ ಚಿತ್ರ ಕಳುಹಿಸಿ ಬಹುಮಾನ ಪಡೆಯಿರಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ರಸ್ತೆಗಳಲ್ಲಿ ತಪ್ಪಾಗಿ ವಾಹನಗಳ ನಿಲುಗಡೆ ಮಾಡುವ ಅಭ್ಯಾಸ ತಡೆಯಲು ಕಾನೂನು ರೂಪಿಸಲು ಚಿಂತನೆ ನಡೆಸುತ್ತಿದ್ದೇನೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ. ತಪ್ಪಾಗಿ ನಿಲುಗಡೆ ಮಾಡಿದ ವಾಹನದ ಭಾವಚಿತ್ರವನ್ನು ಕಳುಹಿಸುವ ವ್ಯಕ್ತಿಗೆ 500 ರೂ. ಬಹುಮಾನ ನೀಡಲಾಗುವುದು. ನೋ ಪಾರ್ಕಿಂಗ್ ಸ್ಥಳದಲ್ಲಿ ಅಥವಾ ತಪ್ಪಾದ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದ ವ್ಯಕ್ತಿಗೆ 1,000 ರೂ. ದಂಡ ವಿಧಿಸಲಾಗುವುದು. ಇದಕ್ಕಾಗಿ ಕಾನೂನನ್ನು ತರಲಿದ್ದು, ನಂತರ ಪಾರ್ಕಿಂಗ್ ಸಮಸ್ಯೆ ಪರಿಹರಿಸಲಾಗುವುದು ಎಂದು ಅವರು ಹೇಳಿದರು.