alex Certify ಮೋದಿಗೆ ಲೇವಡಿ ಮಾಡಿದ ಎಫೆಕ್ಟ್; ಹೆಚ್ಚು ಪ್ರವಾಸಿಗರನ್ನು ಕಳಿಸಿಕೊಡಿ ಎಂದು ಚೀನಾಗೆ ಗೋಗರೆದ ಮಾಲ್ಡೀವ್ಸ್ ಅಧ್ಯಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿಗೆ ಲೇವಡಿ ಮಾಡಿದ ಎಫೆಕ್ಟ್; ಹೆಚ್ಚು ಪ್ರವಾಸಿಗರನ್ನು ಕಳಿಸಿಕೊಡಿ ಎಂದು ಚೀನಾಗೆ ಗೋಗರೆದ ಮಾಲ್ಡೀವ್ಸ್ ಅಧ್ಯಕ್ಷ

ಪ್ರವಾಸೋದ್ಯಮವನ್ನೇ ಆದಾಯವನ್ನಾಗಿ ನೆಚ್ಚಿಕೊಂಡಿರುವ ಮಾಲ್ಡೀವ್ಸ್ ಭಾರತೀಯರ ತಿರುಗೇಟಿನ ನಂತರ ಹೊಡೆತಕ್ಕೆ ಸಿಲುಕಿದೆ. ಹೀಗಾಗಿ ತಮ್ಮ ದೇಶಕ್ಕೆ ಹೆಚ್ಚು ಪ್ರವಾಸಿಗರನ್ನು ಕಳಿಸಿಕೊಡುವಂತೆ ಮಾಲ್ಡೀವ್ಸ್ ಅಧ್ಯಕ್ಷರು ಚೀನಾ ದೇಶಕ್ಕೆ ಮನವಿ ಮಾಡಿದ್ದಾರೆ.

ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ತಮ್ಮ ದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸುವ ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ಚೀನಾಕ್ಕೆ ಮನವಿ ಮಾಡಿದ್ದಾರೆ.

ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆ ನಂತರ ಭಾರತೀಯರು ಮಾಲ್ಡೀವ್ಸ್ ಪ್ರವಾಸ ಹೋಗದಂತೆ ನಿರ್ಧರಿಸಿ ಅಭಿಯಾನ ಆರಂಭಿಸಿದ್ದಾರೆ.

ಚೀನಾಕ್ಕೆ ಐದು ದಿನಗಳ ಭೇಟಿ ನೀಡಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಎರಡನೇ ದಿನದಂದು ಫುಜಿಯಾನ್ ಪ್ರಾಂತ್ಯದಲ್ಲಿ ಮಾಲ್ಡೀವ್ಸ್ ಬ್ಯುಸಿನೆಸ್ ಫೋರಂ ಕುರಿತು ಮಾಡಿದ ಭಾಷಣದಲ್ಲಿ ಚೀನಾವನ್ನು ಮಾಲ್ಡೀವ್ಸ್ ನ ಮಿತ್ರ ಎಂದು ಕರೆದರು. “ಚೀನಾ ನಮ್ಮ ಹತ್ತಿರದ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ಅಭಿವೃದ್ಧಿ ಪಾಲುದಾರರಲ್ಲಿ ಒಂದಾಗಿದೆ” ಎಂದು ಅವರು ಹೇಳಿದರು.

ಮೊಹಮ್ಮದ್ ಮುಯಿಝು 2014 ರಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪ್ರಾರಂಭಿಸಿದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ಯೋಜನೆಗಳನ್ನು ಶ್ಲಾಘಿಸಿದರು. ತಮ್ಮ ಭಾಷಣದಲ್ಲಿ ಮಾಲ್ಡೀವಿಯನ್ ಇತಿಹಾಸದಲ್ಲಿ ಕಂಡ ಅತ್ಯಂತ ಮಹತ್ವದ ಮೂಲಸೌಕರ್ಯ ಯೋಜನೆಗಳನ್ನು ತಲುಪಿಸಿದ್ದಾರೆ ಎಂದು ಬಣ್ಣಿಸಿದರು. ಇದೇ ವೇಳೆ ಮಾಲ್ಡೀವ್ಸ್ ಗೆ ಪ್ರವಾಸಿಗರ ಹರಿವನ್ನು ಹೆಚ್ಚಿಸಲು ಅವರು ಚೀನಾವನ್ನು ಒತ್ತಾಯಿಸಿದರು.

ಹಿಂದೂ ಮಹಾಸಾಗರದ ದ್ವೀಪದಲ್ಲಿ ಸಮಗ್ರ ಪ್ರವಾಸೋದ್ಯಮ ವಲಯವನ್ನು ಅಭಿವೃದ್ಧಿಪಡಿಸಲು ಉಭಯ ದೇಶಗಳು 50 ಮಿಲಿಯನ್ ಡಾಲರ್ ಯೋಜನೆಗೆ ಸಹಿ ಹಾಕಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಧಾನಿ ಮೋದಿಯವರ ಇತ್ತೀಚಿನ ಲಕ್ಷದ್ವೀಪ ಭೇಟಿಯ ಸಂದರ್ಭದಲ್ಲಿ ಮಾಲ್ಡೀವ್ಸ್ ನ ಕೆಲವು ಮಂತ್ರಿಗಳು ಪ್ರಧಾನಿ ಮೋದಿ ಮತ್ತು ಭಾರತದ ಕುರಿತು ಅವಹೇಳನಕಾರಿ ಹೇಳಿಕೆಗಳ ನಂತರ ಉಭಯ ದೇಶಗಳ ರಾಜತಾಂತ್ರಿಕ ಗದ್ದಲ ಏರ್ಪಟ್ಟಿದೆ. ಈ ನಡುವೆ ಮುಯಿಝು ಮಾಲ್ಡೀವ್ಸ್ ಗೆ ಹೆಚ್ಚು ಪ್ರವಾಸಿಗರನ್ನು ಕಳಿಸಿಕೊಡುವಂತೆ ಚೀನಾಗೆ ಮನವಿ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...