
ನಿನ್ನೆ ಸಂಜೆ ನಡೆದ ಶಿವಮೊಗ್ಗ ಲಯನ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ನಡವಣ ರೋಚಕ ಪಂದ್ಯದಲ್ಲಿ 11 ರನ್ ಗಳಿಂದ ಜಯ ಸಾಧಿಸಿ ಶಿವಮೊಗ್ಗ ಲಯನ್ಸ್ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಮಂಗಳೂರು ಡ್ರ್ಯಾಗನ್ಸ್ ನ ಸೆಮಿ ಫೈನಲ್ ಕನಸು ನುಚ್ಚುನೂರಾಗಿದೆ.
ಇಂದು ಮಹಾರಾಜ ಟ್ರೋಫಿಯ ಸೆಮಿ ಫೈನಲ್ ಪಂದ್ಯಗಳು ನಡೆಯುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಲಿಷ್ಠ ತಂಡಗಳು ಸೆಮಿ ಫೈನಲ್ ಗೆ ಎಂಟ್ರಿ ಕೊಟ್ಟಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಇಂದು ಸೇರಲಿದ್ದಾರೆ.
ಎರಡು ಸೆಮಿ ಫೈನಲ್ ಪಂದ್ಯಗಳು ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಟೇಬಲ್ ಟಾಪರ್ ಆಗಿದ್ದ ಹುಬ್ಬಳ್ಳಿ ಟೈಗರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ಮುಖಾಮುಖಿಯಾಗಲಿದ್ದು, ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಮತ್ತು ಗುಲ್ಬರ್ಗ ಮಿಸ್ಟಿಕ್ಸ್ ಸೆಣಸಾಡಲಿವೆ. ನಾಳೆ ಫೈನಲ್ ಪಂದ್ಯವಿದ್ದು ಈ ನಾಲ್ಕು ತಂಡಗಳು ಫೈನಲ್ ಪ್ರವೇಶಿಸಲು ಇಂದು ಬಾರಿ ಹೋರಾಟ ನಡೆಸಲಿವೆ.