
ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಫಾಲ್ಸ್ ಸಮೀಪ ಸೆಲ್ಫಿ ತೆಗೆಯುವಾಗ ಇಬ್ಬರು ಪ್ರವಾಸಿಗರು ಕಾಲುಜಾರಿ ನೀರು ಪಾಲಾಗಿದ್ದಾರೆ.
ಪ್ರವಾಸಕ್ಕೆ ಬಂದ ಮಹಿಳೆ ಜಲಪಾತದ ಬಳಿ ಸೆಲ್ಫತೆ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಹೋದ ಮೈದುನ ಕೂಡ ನೀರುಪಾಲಾಗಿದ್ದಾರೆ. ಸೋಮವಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.